ಬಿಹಾರದ 13ರ ವೈಭವ್‌ ₹1.1 ಕೋಟಿಗೆ ಹರಾಜು! - ಐಪಿಎಲ್‌ ಇತಿಹಾಸದಲ್ಲೇ ಬಿಕರಿಯಾದ ಅತಿಕಿರಿಯ

| Published : Nov 26 2024, 05:28 AM IST

Vaibhav Suryawanshi

ಸಾರಾಂಶ

ಬಿಹಾರದ 13 ವರ್ಷದ ಬ್ಯಾಟರ್‌ ವೈಭವ್‌ ಸೂರ್ಯವಂಶಿ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ₹1.1 ಕೋಟಿಗೆ ಬಿಕರಿಯಾದರು. ಈ ಮೂಲಕ ಐಪಿಎಲ್‌ಗೆ ಆಯ್ಕೆಯಾದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಬಿಹಾರದ 13 ವರ್ಷದ ಬ್ಯಾಟರ್‌ ವೈಭವ್‌ ಸೂರ್ಯವಂಶಿ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ₹1.1 ಕೋಟಿಗೆ ಬಿಕರಿಯಾದರು. ಈ ಮೂಲಕ ಐಪಿಎಲ್‌ಗೆ ಆಯ್ಕೆಯಾದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ತಮಗೆ 12 ವರ್ಷ 284 ದಿನಗಳಾಗಿದ್ದಾಗ ಬಿಹಾರ ರಣಜಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ವೈಭವ್‌, ರಣಜಿ ಆಡಿದ ಅತಿ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. 

ಇತ್ತೀಚೆಗಷ್ಟೇ ಭಾರತ ‘ಎ’ ಪರ ಯೂತ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ‘ಎ’ ವಿರುದ್ಧ 62 ಎಸೆತಗಳಲ್ಲಿ 104 ರನ್‌ ಬಾರಿಸಿದ್ದ ವೈಭವ್‌, ಕಿರಿಯರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿದ್ದರು. ಸೋಮವಾರ ಹರಾಜಿನಲ್ಲಿ ರಾಜಸ್ಥಾನಕ್ಕೆ ಬಿಕರಿಯಾಗುವುದರೊಂದಿಗೆ ವೈಭವ್‌ ಮತ್ತೆ ಸಾಮಾಜಿಕ ತಾಣಗಳಲ್ಲಿ ತಲ್ಲಣ ಸೃಷ್ಟಿಸಿದ್ದಾರೆ. ಅವರ ಬ್ಯಾಟಿಂಗ್‌ ವಿಡಿಯೋಗಳು ಭಾರಿ ವೈರಲ್‌ ಆಗುತ್ತಿದ್ದು, ಆಕರ್ಷಕ ಹೊಡೆತಗಳಿಗೆ ಕ್ರೀಡಾ ಪ್ರೇಮಿಗಳು ಮೆಚ್ಚುಗೆ ಸೂಚಿಸಿದ್ದಾರೆ.