ಆಸ್ಟ್ರೇಲಿಯಾದಲ್ಲಿ 50 ವಿಕೆಟ್‌ : ಟೆಸ್ಟ್‌ನಲ್ಲಿ ಭಾರತೀಯ ವೇಗಿ ಬೂಮ್ರಾ ಹೊಸ ದಾಖಲೆ

| Published : Dec 17 2024, 12:45 AM IST / Updated: Dec 17 2024, 04:04 AM IST

ಸಾರಾಂಶ

ಈ ಸಾಧನೆ ಮಾಡಿದ ಭಾರತದ 2ನೇ ಬೌಲರ್‌. ಬೂಮ್ರಾ ಹೊರತಾಗಿ ಭಾರತದ ಕಪಿಲ್‌ ದೇವ್‌ ಕೂಡಾ ಈ ಸಾಧನೆ ಮಾಡಿದ್ದಾರೆ.

ಬ್ರಿಸ್ಬೇನ್‌: ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಮತ್ತೊಂದು ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ನಲ್ಲಿ 50ಕ್ಕೂ ಹೆಚ್ಚು ವಿಕೆಟ್‌ ಕಿತ್ತ ಭಾರತದ 2ನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮವಾರ ಮಿಚೆಲ್‌ ಸ್ಟಾರ್ಕ್‌ ವಿಕೆಟ್‌ ಪಡೆಯುವ ಮೂಲಕ ಬೂಮ್ರಾ ಈ ಮೈಲುಗಲ್ಲು ಸಾಧಿಸಿದರು. ಅವರು 10 ಪಂದ್ಯಗಳ 19 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್‌ ಪೂರ್ಣಗೊಳಿಸಿದ್ದಾರೆ. 

ಬೂಮ್ರಾ ಹೊರತಾಗಿ ಭಾರತದ ಕಪಿಲ್‌ ದೇವ್‌ ಕೂಡಾ ಈ ಸಾಧನೆ ಮಾಡಿದ್ದಾರೆ. ಅವರು 11 ಪಂದ್ಯಗಳ 21 ಇನ್ನಿಂಗ್ಸ್‌ಗಳಲ್ಲಿ 51 ವಿಕೆಟ್‌ ಕಿತ್ತಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅನಿಲ್‌ ಕುಂಬ್ಳೆ 49, ಆರ್‌.ಅಶ್ವಿನ್‌ 40 ವಿಕೆಟ್‌ ಪಡೆದಿದ್ದಾರೆ.

3ನೇ ಬೌಲರ್: ಹೊರ ದೇಶವೊಂದರಲ್ಲಿ 50+ ವಿಕೆಟ್‌ ಕಿತ್ತ ಭಾರತದ 3ನೇ ಬೌಲರ್‌ ಬೂಮ್ರಾ. ಇಶಾಂತ್‌ ಶರ್ಮಾ ಇಂಗ್ಲೆಂಡ್‌ನಲ್ಲಿ 15 ಪಂದ್ಯಗಳಲ್ಲಿ 51 ವಿಕೆಟ್‌ ಪಡೆದಿದ್ದಾರೆ. ಅನಿಲ್‌ ಕುಂಬ್ಳೆ ದ.ಆಫ್ರಿಕಾ, ವೆಸ್ಟ್‌ಇಂಡೀಸ್‌ನಲ್ಲಿ ತಲಾ 45, ಕಪಿಲ್‌ ದೇವ್‌ ಪಾಕಿಸ್ತಾನದಲ್ಲಿ 43, ಜಾವಗಲ್‌ ಶ್ರೀನಾಥ್‌ ದ.ಆಫ್ರಿಕಾದಲ್ಲಿ 43, ಮೊಹಮದ್‌ ಶಮಿ ಇಂಗ್ಲೆಂಡ್‌ನಲ್ಲಿ 42 ವಿಕೆಟ್‌ ಕಿತ್ತಿದ್ದಾರೆ.

03ನೇ ಅತಿ ವೇಗ: ಆಸ್ಟ್ರೇಲಿಯಾದಲ್ಲಿ ವೇಗದ 50 ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಬೂಮ್ರಾಗೆ 3ನೇ ಸ್ಥಾನ. ಅವರು 2141 ಎಸೆತದಲ್ಲಿ ಈ ಸಾಧನೆ ಮಾಡಿದ್ದಾರೆ. ಬ್ರೆಟ್‌ ಲೀ 2061, ರಿಚರ್ಡ್‌ ಹ್ಯಾಡ್ಲೀ 2117 ಎಸೆತದಲ್ಲಿ 50 ವಿಕೆಟ್‌.