ಕ್ಯಾಂಡಿಡೇಟ್ಸ್‌ ಚೆಸ್‌: ಮೊದಲ ಸುತ್ತಿನಲ್ಲಿ ಭಾರತದ ಐವರೂ ಡ್ರಾಗೆ ತೃಪ್ತಿ

| Published : Apr 06 2024, 12:50 AM IST / Updated: Apr 06 2024, 04:06 AM IST

ಕ್ಯಾಂಡಿಡೇಟ್ಸ್‌ ಚೆಸ್‌: ಮೊದಲ ಸುತ್ತಿನಲ್ಲಿ ಭಾರತದ ಐವರೂ ಡ್ರಾಗೆ ತೃಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ಞಾನಂದ ಫ್ರಾನ್ಸ್‌ನ ಫಿರೌಜಾ ಅಲಿರೆಜಾ ವಿರುದ್ಧ ಡ್ರಾಗೆ ತೃಪ್ತಿಪಟ್ಟರು. ಭಾರತದವರೇ ಆದ ವಿದಿತ್‌ ಗುಜರಾತಿ ಹಾಗೂ ಡಿ.ಗುಕೇಶ್‌ ನಡುವಿನ ಪಂದ್ಯವೂ ಡ್ರಾದಲ್ಲಿ ಅಂತ್ಯಗೊಂಡಿತು.

ಟೊರೊಂಟೊ(ಕೆನಡಾ): ತಾರಾ ಚೆಸ್‌ ಪಟು ಆರ್‌.ಪ್ರಜ್ಞಾನಂದ ಸೇರಿದಂತೆ ಐವರು ಭಾರತೀಯರು ಇಲ್ಲಿ ಆರಂಭಗೊಂಡ ಪ್ರತಿಷ್ಠಿತ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಗುರುವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ ಆರಂಭಿಕ ಸುತ್ತಿನಲ್ಲಿ 18ರ ಪ್ರಜ್ಞಾನಂದ ಅವರು ಫ್ರಾನ್ಸ್‌ನ ಫಿರೌಜಾ ಅಲಿರೆಜಾ ವಿರುದ್ಧ ಡ್ರಾಗೆ ತೃಪ್ತಿಪಟ್ಟರು. ಭಾರತದವರೇ ಆದ ವಿದಿತ್‌ ಗುಜರಾತಿ ಹಾಗೂ ಡಿ.ಗುಕೇಶ್‌ ನಡುವಿನ ಪಂದ್ಯವೂ ಡ್ರಾದಲ್ಲಿ ಅಂತ್ಯಗೊಂಡಿತು. 

2ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗುಕೇಶ್‌ ಸವಾಲು ಎದುರಾಗಲಿದ್ದು, ವಿದಿತ್‌ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಸೆಣಸಲಿದ್ದಾರೆ.ಇದೇ ವೇಳೆ ಮಹಿಳಾ ವಿಭಾಗದಲ್ಲಿ ಪ್ರಜ್ಞಾನಂದ ಅವರ ಸಹೋದರಿ, ಆರ್‌.ವೈಶಾಲಿ ತಮ್ಮ ಪ್ರತಿಸ್ಪರ್ಧಿ ಕೊನೆರು ಹಂಪಿ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. 2ನೇ ಸುತ್ತಿನಲ್ಲಿ ಹಂಪಿ, ರಷ್ಯಾದ ಕ್ಯಾಟೆರಿನಾ ಲಾಗ್ನೊ ವಿರುದ್ಧ, ವೈಶಾಲಿ ಅವರು ಟಾನ್‌ ಝೊಂಗ್ಯಿ ವಿರುದ್ಧ ಸೆಣಸಾಡಲಿದ್ದಾರೆ.

ಭಾರತ vs ಆಸೀಸ್‌ ಹಾಕಿ ಇಂದಿನಿಂದ

ಪರ್ಥ್‌: ಭಾರತ ಪುರುಷರ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಮೊದಲ ಪಂದ್ಯ ಶನಿವಾರ ನಡೆಯಲಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ ಸಿದ್ಧತೆ ದೃಷ್ಟಿಯಲ್ಲಿ ಇತ್ತಂಡಗಳಿಗೂ ಈ ಸರಣಿ ಮಹತ್ವದ್ದೆನಿಸಿದೆ. ಎಲ್ಲಾ ಪಂದ್ಯಗಳಿಗೂ ಪರ್ಥ್‌ ಆತಿಥ್ಯ ವಹಿಸಲಿದೆ. ಏ.7ಕ್ಕೆ 2ನೇ ಪಂದ್ಯ ನಡೆಯಲಿದ್ದು, ಬಳಿಕ ಏ.10, ಏ.12 ಮತ್ತು ಏ.13ಕ್ಕೆ ಕ್ರಮವಾಗಿ ಇತರ ಪಂದ್ಯಗಳು ನಿಗದಿಯಾಗಿವೆ.