ಕ್ಯಾಂಡಿಡೇಟ್ಸ್‌ ಚೆಸ್‌: ವಿದಿತ್‌ ವಿರುದ್ಧ ಪ್ರಜ್ಞಾನಂದಗೆ ಗೆಲುವು, ಗುಕೇಶ್‌ ಡ್ರಾಗೆ ತೃಪ್ತಿ

| Published : Apr 08 2024, 01:04 AM IST / Updated: Apr 08 2024, 04:48 AM IST

ಕ್ಯಾಂಡಿಡೇಟ್ಸ್‌ ಚೆಸ್‌: ವಿದಿತ್‌ ವಿರುದ್ಧ ಪ್ರಜ್ಞಾನಂದಗೆ ಗೆಲುವು, ಗುಕೇಶ್‌ ಡ್ರಾಗೆ ತೃಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ವಿಭಾಗದಲ್ಲಿ ಗೆದ್ದ ವೈಶಾಲಿ ಟೂರ್ನಿಯ ಮೊದಲ ಗೆಲುವು ದಾಖಲಿಸಿದರು. ಕೊನೆರು ಹಂಪಿ ಹಾಗೂ ಚೀನಾದ ಟಾನ್‌ ಝೊಂಗ್ಯಿ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಟೊರೊಂಟೊ(ಕೆನಡಾ): ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಭಾರತದ ತಾರಾ ಚೆಸ್‌ ಪಟುಗಳಾದ ಆರ್‌.ಪ್ರಜ್ಞಾನಂದ ಹಾಗೂ ಅವರ ಸಹೋದರಿ ಆರ್.ವೈಶಾಲಿ ಗೆಲುವು ಸಾಧಿಸಿದ್ದಾರೆ. 

ಶನಿವಾರ ಮಧ್ಯರಾತ್ರಿ ಮುಕ್ತ ವಿಭಾಗದ 3ನೇ ಸುತ್ತಿನಲ್ಲಿ 18ರ ಪ್ರಜ್ಞಾನಂದ ಅವರು ವಿದಿತ್‌ ಗುಜರಾತಿ ವಿರುದ್ಧ ಜಯಭೇರಿ ಬಾರಿಸಿದರು. ಆದರೆ 2ನೇ ಸುತ್ತಿನಲ್ಲಿ ಪ್ರಜ್ಞಾನಂದ ವಿರುದ್ಧ ಗೆದ್ದಿದ್ದ ಗುಕೇಶ್‌ ಈ ಬಾರಿ ರಷ್ಯಾದ ಇಯಾನ್ ನೆಪೋಮ್ನಿಯಾಚ್ಚಿ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು.ಇನ್ನು ಮಹಿಳಾ ವಿಭಾಗದಲ್ಲಿ ಬಲ್ಗೇರಿಯಾದ ನುರ್‌ಗ್ಯುಲ್‌ ಸಲಿಮೋವಾ ಅವರನ್ನು ಸೋಲಿಸಿದ ವೈಶಾಲಿ, ಟೂರ್ನಿಯ ಮೊದಲ ಗೆಲುವು ದಾಖಲಿಸಿದರು. ಕೊನೆರು ಹಂಪಿ ಹಾಗೂ ಚೀನಾದ ಟಾನ್‌ ಝೊಂಗ್ಯಿ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಟೂರ್ನಿಯಲ್ಲಿ ಇನ್ನೂ 11 ಸುತ್ತಿನ ಪಂದ್ಯಗಳು ನಡೆಯಲಿವೆ. ಸದ್ಯ ಪುರುಷರ ವಿಭಾಗದಲ್ಲಿ ಗುಕೇಶ್‌, ಅಮೆರಿಕದ ಫ್ಯಾಬಿಯಾನೊ ಕರುವಾನಾ ಹಾಗೂ ರಷ್ಯಾದ ಇಯಾನ್ ನೆಪೋಮ್ನಿಯಾಚ್ಚಿ ತಲಾ 2 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ವಿದಿತ್‌ ಹಾಗೂ ಪ್ರಜ್ಞಾನಂದ ತಲಾ 1.5 ಅಂಕಗಳನ್ನು ಹೊಂದಿದ್ದಾರೆ.ಮಹಿಳಾ ವಿಭಾಗದಲ್ಲಿ ಚೀನಾದ ಟಾನ್‌ ಝೊಂಗ್ಯಿ 2 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದು, ತಲಾ 1.5 ಅಂಕ ಸಂಪಾದಿಸಿರುವ ವೈಶಾಲಿ, ಕೊನೆರು ಹಂಪಿ ಜಂಟಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ.