ಸಾರಾಂಶ
ಲಾಹೋರ್: ಸದಾ ಒಂದಿಲ್ಲೊಂದು ವಿಚಾರದಲ್ಲಿ ಟ್ರೋಲ್‌ಗೆ ಒಳಗಾಗುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಮತ್ತೆ ಸುದ್ದಿಯಲ್ಲಿದೆ. ಚಾಂಪಿಯನ್ಸ್ ಟ್ರೋಫಿಗೆ ಸಿದ್ಧಗೊಳ್ಳುತ್ತಿರುವ ಲಾಹೋರ್ ಕ್ರೀಡಾಂಗಣದಲ್ಲಿ ಮೈದಾನ ಸಿಬ್ಬಂದಿಗೆ ನೀಡಿದ ವಿಚಿತ್ರ ತರಬೇತಿ ಈಗ ಟ್ರೋಲ್‌ಗೆ ಗುರಿಯಾಗಿದೆ.
ಪಂದ್ಯ ನಡೆಯುತ್ತಿರುವ ವೇಳೆ ಮೈದಾನಕ್ಕೆ ನುಗ್ಗುವ ಅಭಿಮಾನಿಗಳನ್ನು ಎತ್ತಿಕೊಂಡು ಬರಲು ಮೈದಾನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ಅಭಿಮಾನಿಗಳಂತೆ ಮೈದಾನಕ್ಕೆ ನುಗ್ಗುವ ಮತ್ತು ಅವರನ್ನು ಸಿಬ್ಬಂದಿ ಬೆನ್ನತ್ತಿ ಎತ್ತಿಕೊಂಡು ಬರುವ ದೃಶ್ಯ ವಿಡಿಯೋದಲ್ಲಿದೆ.
ನಿಯಮ ಪಾಲಿಸದ ಪಾಕ್ ಫುಟ್ಬಾಲ್ ಸಂಸ್ಥೆಯನ್ನೇ ಬ್ಯಾನ್ ಮಾಡಿದ ಫಿಫಾ!
ಕರಾಚಿ: ನಿಯಮ ಪಾಲಿಸದ್ದಕ್ಕೆ ಪಾಕಿಸ್ತಾನ ಫುಟ್ಬಾಲ್ ಸಂಸ್ಥೆಯನ್ನು ಜಾಗತಿಕ ಫುಟ್ಬಾಲ್ ಆಡಳಿತ ಸಮಿತಿಯಾಗಿರುವ ಫಿಫಾ ಅಮಾನತುಗೊಳಿಸಿದೆ. ಈ ಮೂಲಕ 2017ರ ಬಳಿಕ ಪಾಕ್ ಫುಟ್ಬಾಲ್ ಸಂಸ್ಥೆ 3ನೇ ಬಾರಿ ಅಮಾನತುಗೊಂಡಂತಾಗಿದೆ.
ಕ್ರೀಡೆಯ ಸುಗಮ ಮತ್ತು ನ್ಯಾಯಯುತ ಆಡಳಿತಕ್ಕೆ ಅಗತ್ಯವೆಂದು ಪರಿಗಣಿಸಿದ ನಿಯಮಗಳಿಗೆ ತಿದ್ದುಪಡಿಗಳನ್ನು ಮಾಡಲು ಪಾಕ್ ಪುಟ್ಬಾಲ್ ಸಂಸ್ಥೆಯು ವಿಫಲವಾದ ಕಾರಣ ಫಿಫಾ ಈ ಕ್ರಮ ಕೈಗೊಂಡಿದೆ. ತನ್ನ ನಿಮಯಗಳಲ್ಲಿ ತಿದ್ದುಪಡಿಗಳನ್ನು ಮಾಡುವವರೆಗೂ ಸಂಸ್ಥೆಯನ್ನು ಅಮಾನತುನಲ್ಲಿಡಲಾಗುವುದು ಎಂದು ಫಿಫಾ ಹೇಳಿದೆ. 2019ರಿಂದ ಫಿಫಾ ನೇಮಿಸಿದ ಆಡಳಿತ ಸಮಿತಿಯು ಪಾಕಿಸ್ತಾನ ಫುಟ್ಬಾಲ್ ಸಂಸ್ಥೆಯನ್ನು ಮುನ್ನಡೆಸುತ್ತಿದೆ. ಸದ್ಯ ಈ ಸಮಿತಿಗೆ ಹಾರೂನ್ ಮಲಿಕ್ ಅಧ್ಯಕ್ಷರಾಗಿದ್ದಾರೆ.