ವಾಲಿಬಾಲ್ ಲೀಗ್‌ : ಚೆನ್ನೈ ವಿರುದ್ಧ ಪರಾಭವಗೊಂಡ ಬೆಂಗಳೂರು ಟಾರ್ಪೆಡೊಸ್‌

| Published : Mar 09 2024, 01:31 AM IST

ಸಾರಾಂಶ

ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಟಾರ್ಪೆಡೊಸ್‌ ತಂಡವನ್ನು ಚೆನ್ನೈ ಬ್ಲಿಟ್ಜ್ ನೇರ ಸೆಟ್‌ಗಳಿಂದ ಸೋಲಿಸಿತು. ಚೆನ್ನೈನ ರಮೇಶ್ ಕುಮಾರ್ ಮತ್ತು ದಿಲೀಪ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು.

ಚೆನ್ನೈ: ಚೆನ್ನೈನ ಜವಾಹರ್‌ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟಾರ್ಪೆಡೊಸ್‌ ತಂಡ ಚೆನ್ನೈ ಬ್ಲಿಟ್ಜ್ ವಿರುದ್ಧ ಪರಾಭವಗೊಂಡಿತು.ಬೆಂಗಳೂರು ಟಾರ್ಪೆಡೊಸ್‌ ತಂಡವನ್ನು ಚೆನ್ನೈ ಬ್ಲಿಟ್ಜ್ 16-14, 15-11, 15-13ರ ಅಂತರದಲ್ಲಿ ನೇರ ಸೆಟ್‌ಗಳಿಂದ ಸೋಲಿಸಿತು. ಚೆನ್ನೈನ ರಮೇಶ್ ಕುಮಾರ್ ಮತ್ತು ದಿಲೀಪ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು.ಜು.26ಕ್ಕೆ ಒಲಿಂಪಿಕ್ಸ್‌ ಉದ್ಘಾಟನೆ

ಪ್ಯಾರಿಸ್‌: ಬಹುನಿರೀಕ್ಷಿತ ಪ್ಯಾರಿಸ್‌ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಜು.26ರಂದು ನಡೆಯಲಿದೆ ಎಂದು ಕ್ರೀಡಾಕೂಟದ ಆಯೋಜಕರು ತಿಳಿಸಿದ್ದಾರೆ. ಇದೇ ಮೊದಲ ಬಾರಿ ಕ್ರೀಡಾಂಗಣದ ಹೊರಗಡೆ ಉದ್ಘಾಟನಾ ಸಮಾರಂಭ ನೆರವೇರಲಿದೆ. ಸೀನ್‌ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮ ಆರಂಭಗೊಳ್ಳಲಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿ.ಮೀ. ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಲಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಕ್ರೀಡಾಕೂಟ ಜು.26ರಿಂದ ಆಗಸ್ಟ್‌ 11ರ ವರೆಗೂ ನಡೆಯಲಿದೆ.