ಚೆನ್ನೈ vs ಗುಜರಾತ್‌ ಫೈಟ್‌: ಪ್ಲೇ-ಆಫ್‌ ರೇಸ್‌ನ ಕದನ ಕುತೂಹಲ

| Published : May 10 2024, 01:34 AM IST / Updated: May 10 2024, 04:18 AM IST

ಸಾರಾಂಶ

ಹಾಲಿ ಚಾಂಪಿಯನ್‌ ಚೆನ್ನೈ ಗೆದ್ದರೆ ತಂಡದ ಪ್ಲೇ-ಆಫ್‌ ಹಾದಿ ಸುಗಮ. ಗುಜರಾತ್‌ ಸೋತರೆ ತಂಡದ ಪ್ಲೇ-ಆಫ್‌ ಹಾದಿ ಅಧಿಕೃತವಾಗಿ ಬಂದ್.

ಅಹಮದಾಬಾದ್‌: ತಾರಾ ಬೌಲರ್‌ಗಳ ಅನುಪಸ್ಥಿತಿಯಲ್ಲೂ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಂಡಿರುವ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಶುಕ್ರವಾರ ಗುಜರಾತ್‌ ಟೈಟಾನ್ಸ್‌ ಸವಾಲು ಎದುರಾಗಲಿದೆ.ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಚೆನ್ನೈ 11ರಲ್ಲಿ 6 ಪಂದ್ಯಗಳಲ್ಲಿ ಗೆದ್ದಿದ್ದು, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

 ಈ ಪಂದ್ಯದಲ್ಲಿ ಗೆದ್ದರೆ ತಂಡ 3ನೇ ಸ್ಥಾನಕ್ಕೇರಲಿದ್ದು, ಪ್ಲೇ-ಆಫ್‌ ಹಾದಿಯನ್ನು ಮತ್ತಷ್ಟು ಸುಗಮಗೊಳಿ ಸಲಿದೆ. ಅತ್ತ ಗುಜರಾತ್‌ 11ರಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದುಕೊಂಡಿದೆ. 

ತಂಡಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದರಷ್ಟೇ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. ಸೋತರೆ ಪ್ಲೇ-ಆಫ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಚೆನ್ನೈನ ದೀಪಕ್‌ ಚಹರ್‌, ಮಥೀಶ ಪತಿರನ ಗಾಯಗೊಂಡು ಟೂರ್ನಿಯಿಂದ ಹೊರಬಿದ್ಗಿದ್ದು, ಮುಸ್ತಾಫಿಜುರ್‌ ಬಾಂಗ್ಲಾದೇಶ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ವೇಗದ ಬೌಲಿಂಗ್ ಪಡೆ ಮತ್ತಷ್ಟು ಸೊರಗಿದ್ದು, ಸ್ಪಿನ್ನರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಅತ್ತ ಗುಜರಾತ್‌ ಎಲ್ಲಾ ವಿಭಾಗದಲ್ಲೂ ವಿಫಲವಾಗುತ್ತಿದ್ದು, ಯಾವ ಪ್ರಯೋಗ ನಡೆಸಿದರೂ ತಂಡಕ್ಕೆ ಗೆಲುವು ಸಿಗುತ್ತಿಲ್ಲ. ಕಳೆದ 5 ಪಂದ್ಯಗಳಲ್ಲಿ ತಂಡ 1ರಲ್ಲಿ ಮಾತ್ರ ಗೆದ್ದಿದ್ದು, ಅಸಾಧಾರಣ ಪ್ರದರ್ಶನ ನೀಡಿದರಷ್ಟೇ ಚೆನ್ನೈ ವಿರುದ್ಧ ಗೆದ್ದು ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಲಿದೆ.

ಒಟ್ಟು ಮುಖಾಮುಖಿ: 06

ಚೆನ್ನೈ: 03ಗುಜರಾತ್‌: 03

ಸಂಭವನೀಯರ ಪಟ್ಟಿ

ಚೆನ್ನೈ: ಋತುರಾಜ್‌(ನಾಯಕ), ರಹಾನೆ, ಡ್ಯಾರಿಲ್‌, ದುಬೆ, ಅಲಿ, ಜಡೇಜಾ, ಧೋನಿ, ಸ್ಯಾಂಟ್ನರ್‌, ಶಾರ್ದೂಲ್‌, ಗ್ಲೀಸನ್‌, ತುಷಾರ್‌.ಗುಜರಾತ್‌: ಸಾಹ, ಗಿಲ್‌(ನಾಯಕ), ಸುದರ್ಶನ್‌, ಮಿಲ್ಲರ್‌, ಶಾರುಖ್‌, ತೆವಾಟಿಯಾ, ರಶೀದ್‌, ನೂರ್‌, ಮಾನವ್‌, ಮೋಹಿತ್, ಜೋಶುಆ.

ಸಂಜೆ: 7.30ಕ್ಕೆ