ಸಾರಾಂಶ
ಸೋಲಿನ ಹೊರತಾಗಿಯೂ ಡೆಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. 3ನೇ ಗೆಲುವು ಸಾಧಿಸಿದ ಯುಪಿ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ನವದೆಹಲಿ: ದೀಪ್ತಿ ಶರ್ಮಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪ್ರದರ್ಶಿದ ಅಭೂತಪೂರ್ವ ಆಟದ ಡಬ್ಲ್ಯುಪಿಎಲ್‌ನಲ್ಲಿ ಯುಪಿ ವಾರಿಯರ್ಸ್ 3ನೇ ಗೆಲುವು ಸಾಧಿಸಿದ್ದು, ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ 1 ರನ್ ರೋಚಕ ಗೆಲುವು ಸಾಧಿಸಿತು. ಸೋಲಿನ ಹೊರತಾಗಿಯೂ ಡೆಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ 8 ವಿಕೆಟ್ ಕಳೆದುಕೊಂಡು ಗಳಿಸಿದ್ದು 138 ರನ್. ದೀಪ್ತಿ ಶರ್ಮಾ(59) ತಮ್ಮ ಲಯ ಮುಂದುವರಿಸಿದ ತಂಡಕ್ಕೆ ನೆರವಾದರೂ ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಅಲೀಸಾ ಹೀಲಿ 29 ರನ್ ಕೊಡುಗೆ ನೀಡಿದರು.ಸುಲಭ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಒಂದು ಹಂತದಲ್ಲಿ ಸುಲಭ ಜಯದ ನಿರೀಕ್ಷೆಯಲ್ಲಿತ್ತು. ಆದರೆ ಕೊನೆ 2 ಓವರಲ್ಲಿ 6 ವಿಕೆಟ್ ಕಳೆದುಕೊಂಡ ತಂಡ ಸೋಲುಂಡಿತು. ತಂಡ ಕೊನೆ ಎಸೆತದಲ್ಲಿ ಆಲೌಟಾಯಿತು. ಏಕಾಂಗಿ ಹೋರಾಟ ಪ್ರದರ್ಶಿಸಿದ ಮೆಗ್ ಲ್ಯಾನಿಂಗ್ 60 ರನ್ ಸಿಡಿಸಿದರು. ದೀಪ್ತಿ 4 ವಿಕೆಟ್ ಕಿತ್ತರು.