ಫೆಡರೇಶನ್‌ ಕಪ್‌ ಅಥ್ಲೆಟಿಕ್ಸ್‌: ಕರ್ನಾಟಕದ ಕರಿಶ್ಮಾಗೆ ಕಂಚಿನ ಪದಕ

| Published : May 13 2024, 12:07 AM IST / Updated: May 13 2024, 04:16 AM IST

ಸಾರಾಂಶ

ರಾಷ್ಟ್ರೀಯ ಫೆಡರೇಶನ್‌ ಕಪ್‌ ಅಥ್ಲೆಟಿಕ್ಸ್‌ ಕೂಟದ ಮೊದಲ ದಿನ ಕರ್ನಾಟಕಕ್ಕೆ ಒಂದು ಕಂಚಿನ ಪದಕ. ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌. ಇದೇ ವೇಳೆ, ಅಮೆರಿಕದಲ್ಲಿ ನಡೆದ ಸ್ಪರ್ಧೆಯಲ್ಲಿ 1500 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದ ಉತ್ತರ ಪ್ರದೇಶದ ದೀಕ್ಷಾ.

ಭುವನೇಶ್ವರ: ಇಲ್ಲಿ ಭಾನುವಾರ ಆರಂಭಗೊಂಡ 27ನೇ ರಾಷ್ಟ್ರೀಯ ಫೆಡರೇಶನ್‌ ಕಪ್‌ ಹಿರಿಯರ ಅಥ್ಲೆಟಿಕ್ಸ್‌ ಕೂಟದ ಮಹಿಳೆಯರ ಜಾವೆಲಿನ್‌ ಥ್ರೋನಲ್ಲಿ ಕರ್ನಾಟಕದ ಕರಿಶ್ಮಾ ಸನಿಲ್‌ ಬೆಳ್ಳಿ ಪದಕ ಜಯಿಸಿದರು. 49.91 ಮೀ. ದೂರಕ್ಕೆ ಜಾವೆಲಿನ್‌ ಎಸೆದ ಕರಿಶ್ಮಾ 2ನೇ ಸ್ಥಾನ ಪಡೆದರು. ಆಂಧ್ರದ ರಶ್ಮಿ 54.75 ಮೀ. ಎಸೆದು ಚಿನ್ನ ಗೆದ್ದರೆ, ಪಂಜಾಬ್‌ನ ರೂಪಿಂದರ್‌ ಕೌರ್‌ 47.66 ಮೀ. ದೂರಕ್ಕೆ ಎಸೆದು ಕಂಚಿಗೆ ತೃಪ್ತಿಪಟ್ಟರು.1500 ಮೀಟರ್‌ ರೇಸ್‌ನಲ್ಲಿ ದೀಕ್ಷಾ ರಾಷ್ಟ್ರೀಯ ದಾಖಲೆ

ಲಾಸ್‌ ಏಂಜಲೀಸ್‌(ಅಮೆರಿಕ): ಭಾರತದ ಕೆ.ಎಂ. ದೀಕ್ಷಾ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಮಹಿಳೆಯರ 1500 ಮೀ. ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಶನಿವಾರ ಉತ್ತರ ಪ್ರದೇಶದ 25 ವರ್ಷದ ದೀಕ್ಷಾ 4 ನಿಮಿಷ 04.78 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನಿಯಾದರು. ಈ ಮೂಲಕ ಹರ್ಮಿಲನ್‌ ಬೇನ್ಸ್‌ 2021ರಲ್ಲಿ ವಾರಂಗಲ್‌ನಲ್ಲಿ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ(4 ನಿಮಿಷ 05.39 ಸೆಕೆಂಡ್‌)ಯನ್ನು ಮುರಿದರು. ಇದೇ ವೇಳೆ ಪುರುಷರ 5000 ಮೀ.ನಲ್ಲಿ ಅವಿನಾಶ್‌ ಸಾಬ್ಳೆ(13 ನಿಮಿಷ 20.37 ಸೆಕೆಂಡ್‌) 2ನೇ ಸ್ಥಾನ ಪಡೆದರು.