ಸಾರಾಂಶ
ಪ್ಯಾರಿಸ್: ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಇಲ್ಲಿ ಮಂಗಳವಾರದಿಂದ ಆರಂಭಗೊಂಡ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಲಕ್ಷ್ಯ, ಜಪಾನ್‌ನ ಕೆಂಟಾ ಸುನೆಯಾಮ ವಿರುದ್ಧ 15-21, 21-15, 21-3 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.
ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ವಿಶ್ವ ನಂ.1 ಸಾತ್ವಿಕ್-ಚಿರಾಗ್ ಮಲೇಷ್ಯಾದ ಒಂಗ್ ಸಿನ್ ಹಾಗೂ ತಿಯೊ ಯಿ ವಿರುದ್ಧ 21-13, 24-22 ಗೇಮ್‌ಗಳಲ್ಲಿ ಗೆದ್ದರು.
ಇನ್ನು ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್ ಹಾಗೂ ತ್ರೀಸಾ ಜಾಲಿ 16-21, 21-19, 21-17 ಗೇಮ್‌ಗಳಲ್ಲಿ ಭಾರತದವರೇ ಆದ ಅಶ್ವಿನಿ ಪೊನ್ನಪ್ಪ-ತನೀಶಾ ಕ್ರಾಸ್ಟೋ ವಿರುದ್ಧ ಗೆದ್ದು 2ನೇ ಸುತ್ತು ಪ್ರವೇಶಿಸಿದರು.
ಪ್ಯಾರಾಲಿಂಪಿಕ್ ಸಮಿತಿ ಮೇಲಿನ ಅಮಾನತು ತೆರವು
ನವದೆಹಲಿ: ಭಾರತೀಯ ಪ್ಯಾರಾಲಿಂಪಿಕ್ ಸಮಿತಿ(ಪಿಸಿಐ) ಮೇಲೆ ಹೇರಿದ್ದ ಅಮಾನತ್ತನ್ನು ಕೇಂದ್ರ ಕ್ರೀಡಾ ಸಚಿವಾಲಯ ಮಂಗಳವಾರ ತೆರವುಗೊಳಿಸಿದೆ.
ಬಹಳ ದಿನಗಳಿಂದ ಬಾಕಿ ಇದ್ದ ಚುನಾವಣಾ ಪ್ರಕ್ರಿಯೆಯನ್ನು ಪಿಸಿಐ ಆರಂಭಿಸಿದ ಬೆನ್ನಲ್ಲೇ ಅಮಾನತು ತೆರವುಗೊಳಿಸಲಾಗಿದೆ.
3 ಬಾರಿ ಪ್ಯಾರಾಲಿಂಪಿಕ್ ಪದಕ ವಿಜೇತ ದೇವೇಂದ್ರ ಝಝಾರಿಯಾ ಪಿಸಿಐನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ. ಮಾ.9ರಂದು ಚುನಾವಣೆ ನಿಗದಿಯಾಗಿದೆ.