ಸಾರಾಂಶ
ಪದಕ ನಿರೀಕ್ಷೆಯಲ್ಲಿದ್ದ ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್‌ನಲ್ಲೇ ಸೋತು ಹೊರಬಿದ್ದರು. ಅವರು ಒಲಿಂಪಿಕ್ ಚಾಂಪಿಯನ್, ಚೀನಾದ ಚೆನ್ ಯೂಫೀ ವಿರುದ್ಧ ಸೋಲು ಕಂಡರು.
ಪ್ಯಾರಿಸ್: ವಿಶ್ವ ನಂ.1 ಪುರುಷ ಡಬಲ್ಸ್ ಜೋಡಿ, ಭಾರತದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಪದಕ ನಿರೀಕ್ಷೆಯಲ್ಲಿದ್ದ ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್‌ನಲ್ಲೇ ಸೋತು ಹೊರಬಿದ್ದರು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಜೋಡಿಗೆ ಮಲೇಷ್ಯಾದ ಸುಪಾಕ್ ಜೊಮ್ಕೊ-ಕಿಟ್ಟಿನುಪೊಂಗ್ ಕೆಡ್ರೆನ್ ವಿರುದ್ಧ 21-19, 21-13 ಗೇಮ್‌ಗಳ ಅಂತರದಲ್ಲಿ ಸುಲಭ ಗೆಲುವು ಲಭಿಸಿತು.
2022ರ ಚಾಂಪಿಯನ್ ಸಾತ್ವಿಕ್-ಚಿರಾಗ್ ಸೆಮಿಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್, ದಕ್ಷಿಣ ಕೊರಿಯಾದ ಕಾಂಗ್ ಮಿನ್ ಹ್ಯುಕ್-ಸೋ ಸ್ಯುಂಗ್ ವಿರುದ್ಧ ಸೆಣಸಾಡಲಿದೆ.
ಈ ಜೋಡಿ ಜನವರಿಯಲ್ಲಿ ಸಾತ್ವಿಕ್-ಚಿರಾಗ್‌ರನ್ನು ಇಂಡಿಯಾ ಓಪನ್ ಫೈನಲ್‌ನಲ್ಲಿ ಸೋಲಿಸಿತ್ತು.ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಅವರು ಒಲಿಂಪಿಕ್ ಚಾಂಪಿಯನ್, ಚೀನಾದ ಚೆನ್ ಯು ಫೀ ವಿರುದ್ಧ 24-22, 17-21, 18-21ರಲ್ಲಿ ವೀರೋಚಿತ ಸೋಲು ಕಂಡರು.