ಸಾರಾಂಶ
ಸಿಂಗಲ್ಸ್‌ನಲ್ಲಿ ಜರ್ಮನಿಯ ಟಟಾನ ಮರಿಯಾ ಚಾಂಪಿಯನ್. ಫೈನಲಲ್ಲಿ ಫ್ರಾನ್ಸ್‌ನ ಲಿಯೊಲಿಯ ಜೀನ್‌ಜೀನ್ ವಿರುದ್ಧ ಜಯ.
ಬೆಂಗಳೂರು : ಬೆಂಗಳೂರಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಕ್ರೀಡಾಂಗಣದಲ್ಲಿ ನಡೆದ ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಚಾಂಪಿಯನ್ ಆಗಿ ಜರ್ಮನಿಯ ಟಟಾನ ಮರಿಯಾ ಹೊರಹೊಮ್ಮಿದ್ದಾರೆ.
ಭಾನುವಾರ ನಡೆದ ಫೈನಲ್‌ನಲ್ಲಿ ವಿಶ್ವ ನಂ.90, 37 ವರ್ಷದ ಮರಿಯಾ, ವಿಶ್ವ ರ್‍ಯಾಂಕಿಂಗ್‌ನಲ್ಲಿ 150ನೇ ಸ್ಥಾನದಲ್ಲಿರುವ, 29 ವರ್ಷದ ಫ್ರಾನ್ಸ್‌ನ ಲಿಯೊಲಿಯ ಜೀನ್‌ಜೀನ್ ವಿರುದ್ಧ 6-7, 6-3, 6-4 ಸೆಟ್‌ಗಳಲ್ಲಿ ಜಯಿಸಿದರು. ಪ್ರಶಸ್ತಿ ವಿಜೇತೆಗೆ 13.13 ಲಕ್ಷ ರು., ರನ್ನರ್-ಅಪ್ ಲಿಯೊಲಿಯಾಗೆ 7.02 ಲಕ್ಷ ರು. ಬಹುಮಾನ ಮೊತ್ತ ದೊರೆಯಿತು.
ಕಳೆದೊಂದು ವಾರದಿಂದ ನಡೆದ ಟೂರ್ನಿಯಲ್ಲಿ ಭಾರತ ಸೇರಿ ವಿವಿಧ ದೇಶಗಳ ಆಟಗಾರ್ತಿಯರು ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು.