ಮಹಿಳೆಯರು ಮಾತ್ರವಲ್ಲದೇ ಪುರುಷರ ವಿರುದ್ಧವೂ ಸ್ಪರ್ಧಿಸುತ್ತಿದ್ದ ಹಮೀದಾ ಬಾನು 300ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳನ್ನು ಗೆದ್ದಿದ್ದಾರೆ.

ನವದೆಹಲಿ: ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಖ್ಯಾತಿಯ ಹಮೀದಾ ಬಾನು ಅವರಿಗೆ ಗೂಗಲ್‌ ಸಂಸ್ಥೆಯು ಶನಿವಾರ(ಮೇ 4) ಡೂಡಲ್‌ ಮೂಲಕ ವಿಶೇಷ ಗೌರವ ಸಲ್ಲಿಸಿದೆ. 1900ರ ಆರಂಭದಲ್ಲಿ ಉತ್ತರ ಪ್ರದೇಶದ ಆಲಿಘರ್‌ನಲ್ಲಿ ಜನಿಸಿದ್ದ ಹಮೀದಾ, 1940-50ರ ನಡುವೆ ಭಾರತದ ಕುಸ್ತಿ ಅಖಾಡದಲ್ಲಿ ಭಾರಿ ಸಂಚಲನ ಮೂಡಿಸಿದ್ದರು.

 ಮಹಿಳೆಯರು ಮಾತ್ರವಲ್ಲದೇ ಪುರುಷರ ವಿರುದ್ಧವೂ ಸ್ಪರ್ಧಿಸುತ್ತಿದ್ದ ಹಮೀದಾ 300ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳನ್ನು ಗೆದ್ದಿದ್ದಾರೆ. 1954ರ ಮೇ 4ರಂದು ಆಗಿನ ಪ್ರಖ್ಯಾತ ಪುರುಷ ಕುಸ್ತಿಪಟು ಬಾಬಾ ಪೈಲ್ವಾನ್‌ರನ್ನು ಹಮೀದಾ ಸೋಲಿಸಿದ್ದರು. ಇದರ ಸ್ಮರಣಾರ್ಥ ಶನಿವಾರ ಹಮೀದಾರ ಡೂಡಲ್‌ ಸೃಷ್ಟಿಸಿ ಗೂಗಲ್‌ ಗೌರವ ಸಲ್ಲಿಸಿದೆ. ಬೆಂಗಳೂರು ಮೂಲದ ಕಲಾವಿದೆ ದಿವ್ಯಾ ನೇಗಿ ಈ ಡೂಡಲ್‌ ರಚಿಸಿದ್ದಾರೆ.ರೋಹಿತ್‌ಗೆ ಬೆನ್ನು ನೋವು: ವಿಶ್ವಕಪ್‌ಗೆ ಮುನ್ನ ಆತಂಕ!

ಮುಂಬೈ: ಭಾರತದ ನಾಯಕ, ಮುಂಬೈ ಇಂಡಿಯನ್ಸ್‌ನ ತಾರಾ ಆಟಗಾರ ರೋಹಿತ್‌ ಶರ್ಮಾಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಬಹುನಿರೀಕ್ಷಿತ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಆತಂಕ ಶುರುವಾಗಿದೆ. ಶುಕ್ರವಾರ ಕೋಲ್ಕತಾ ವಿರುದ್ಧ ಪಂದ್ಯಕ್ಕೂ ಮುನ್ನ ರೋಹಿತ್‌ಗೆ ಬೆನ್ನು ನೋವು ಶುರುವಾಗಿದೆ. ಹೀಗಾಗಿ ಅವರು ಕೇವಲ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದರು.

 ರೋಹಿತ್‌ ಬಗ್ಗೆ ಪಂದ್ಯದ ಬಳಿಕ ಮುಂಬೈ ತಂಡದ ಹಿರಿಯ ಸ್ಪಿನ್ನರ್‌ ಚಾವ್ಲಾ ಮಾಹಿತಿ ನೀಡಿದ್ದು, ರೋಹಿತ್‌ಗೆ ಸಣ್ಣ ಮಟ್ಟಿನ ಬೆನ್ನು ನೋವು ಕಾಣಿಸಿಕೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಫೀಲ್ಡ್‌ಗೆ ಇಳಿಸಲಿಲ್ಲ’ ಎಂದಿದ್ದಾರೆ. ಬೆನ್ನು ನೋವು ಸಣ್ಣ ಮಟ್ಟಿನದ್ದಾಗಿದ್ದು, ಮುಂದಿನ ಪಂದ್ಯಗಳಲ್ಲಿ ಆಡುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.