ಸಾರಾಂಶ
ಜೇವರ್ಗಿ(ಕಲಬುರಗಿ): ಭಾರತದ ತಾರಾ ಯುವ ಕ್ರಿಕೆಟ್ ಆಟಗಾರ್ತಿ, ಇತ್ತೀಚೆಗಷ್ಟೇ ಕೊನೆಗೊಂಡ ಮಹಿಳಾ ಐಪಿಎಲ್ ಖ್ಯಾತಿಯ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರು ಬುಧವಾರ ತಮ್ಮ ಹುಟ್ಟೂರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮಕ್ಕೆ ಆಗಮಿಸಿದ್ದು, ಈ ವೇಳೆ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಶ್ರೇಯಾಂಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ ಗ್ರಾಮಸ್ಥರು, ಹೂ ಮಳೆ ಸುರಿಸಿ ವಿಶೇಷವಾಗಿ ಗೌರವಿಸಿದರು. ಬಳಿಕ ಕಲಬುರಗಿ ಎಸ್ಪಿ ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರೇಯಾಂಕಾ ಪಾಟೀಲ್‌ರನ್ನು ಡಿಸಿ ಫೌಜಿಯಾ ತರನ್ನುಮ್, ಎಸ್ಪಿ ಅಕ್ಷಯ್ ಹಾಗೂ ಇತರ ಅಧಿಕಾರಿಗಳು ಸನ್ಮಾನಿಸಿದರು.
ಬಾಂಗ್ಲಾ ವಿರುದ್ಧ ಭಾರತ ವನಿತೆಯರಿಗೆ ಟಿ20 ಸರಣಿ
ಢಾಕಾ: ಇದೇ ತಿಂಗಳು 28ರಿಂದ ಮೇ 9ರ ವರೆಗೂ ಭಾರತ ಮಹಿಳಾ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಏ.28ರಂದು ಮೊದಲ ಪಂದ್ಯ ನಡೆಯಲಿದ್ದು, ಏ.30, ಮೇ 2, 6, 9ರಂದು ಕ್ರಮವಾಗಿ ಉಳಿದ 4 ಪಂದ್ಯಗಳು ನಡೆಯಲಿವೆ.