ಕ್ಯಾಂಡಿಡೇಟ್ಸ್‌ ಚೆಸ್‌: ವಿದಿತ್‌ಗೆ ಸತತ 2ನೇ ಸುತ್ತಲ್ಲೂ ಸೋಲು

| Published : Apr 09 2024, 12:48 AM IST / Updated: Apr 09 2024, 03:20 AM IST

ಕ್ಯಾಂಡಿಡೇಟ್ಸ್‌ ಚೆಸ್‌: ವಿದಿತ್‌ಗೆ ಸತತ 2ನೇ ಸುತ್ತಲ್ಲೂ ಸೋಲು
Share this Article
  • FB
  • TW
  • Linkdin
  • Email

ಸಾರಾಂಶ

ಡ್ರಾಗೆ ತೃಪ್ತಿಪಟ್ಟ ಪ್ರಜ್ಞಾನಂದ, ವೈಶಾಲಿ, ಡಿ.ಗುಕೇಶ್‌. ವೈಶಾಲಿ 2 ಅಂಕದೊಂದಿಗೆ ಜಂಟಿ 3ನೇ ಸ್ಥಾನದಲ್ಲಿದ್ದು, 1.5 ಅಂಕ ಹೊಂದಿರುವ ಕೊನೆರು ಹಂಪಿ ಜಂಟಿ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಟೊರೊಂಟೊ(ಕೆನಡಾ): ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಭಾರತದ ತಾರಾ ಚೆಸ್‌ ಪಟು ವಿದಿತ್‌ ಗುಜರಾತಿ ಸತತ 2 ಸುತ್ತುಗಳಲ್ಲಿ ಸೋಲನುಭವಿಸಿದ್ದಾರೆ. 3ನೇ ಸುತ್ತಿನಲ್ಲಿ ಆರ್‌.ಪ್ರಜ್ಞಾನಂದ ವಿರುದ್ಧ ಪರಾಭವಗೊಂಡಿದ್ದ ವಿದಿತ್‌ಗೆ ಭಾನುವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ 4ನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಇಯಾನ್ ನೆಪೋಮ್ನಿಯಾಚ್ಚಿ ವಿರುದ್ಧ ಸೋಲುಂಡರು. 

ಇದೇ ವೇಳೆ ಡಿ.ಗುಕೇಶ್‌ ಅವರು ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ, ಆರ್‌.ಪ್ರಜ್ಞಾನಂದ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. ಸದ್ಯ ಇಯಾನ್ 3 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಗುಕೇಶ್‌, ಕರುವಾನಾ ತಲಾ 2.5 ಅಂಕಗಳೊಂದಿಗೆ ಜಂಟಿ 2ನೇ, ಪ್ರಜ್ಞಾನಂದ(2 ಅಂಕ) 3ನೇ ಸ್ಥಾನದಲ್ಲಿದ್ದಾರೆ.ಇನ್ನು, ಮಹಿಳಾ ವಿಭಾಗದಲ್ಲಿ ಆರ್‌.ವೈಶಾಲಿ ಅವರು ರಷ್ಯಾದ ಅಲೆಕ್ಸಾಂಡ್ರಾ ಗೊರಿಯಾಚ್ಕಿನಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. 

ಕೊನೆರು ಹಂಪಿ ಬಲ್ಗೇರಿಯಾದ ಸಲಿಮೋವಾ ವಿರುದ್ಧ ಸೋಲನುಭವಿಸಿದರು. ವೈಶಾಲಿ 2 ಅಂಕದೊಂದಿಗೆ ಜಂಟಿ 3ನೇ ಸ್ಥಾನದಲ್ಲಿದ್ದು, 1.5 ಅಂಕ ಹೊಂದಿರುವ ಕೊನೆರು ಹಂಪಿ ಜಂಟಿ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಬ್ರೂಕ್‌ ಬದಲು ಡೆಲ್ಲಿಗೆ ಆಫ್ರಿಕಾ ವೇಗಿ ಲಿಜಾಡ್‌

ನವದೆಹಲಿ: ವೈಯಕ್ತಿಕ ಕಾರಣಕ್ಕೆ 17ನೇ ಆವೃತ್ತಿ ಐಪಿಎಲ್‌ನಿಂದ ಹೊರಗುಳಿದಿರುವ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌ ಬದಲು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ದಕ್ಷಿಣ ಆಫ್ರಿಕಾದ ವೇಗಿ ಲಿಜಾಡ್‌ ವಿಲಿಯಮ್ಸ್‌ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. 2021ರಲ್ಲಿ ಆಫ್ರಿಕಾ ಪರ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿರುವ ವಿಲಿಯಮ್ಸ್‌, 2 ಟೆಸ್ಟ್‌, 4 ಏಕದಿನ, 11 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರನ್ನು ಡೆಲ್ಲಿ ₹50 ಲಕ್ಷ ನೀಡಿ ಖರೀದಿಸಿದೆ.