ಕ್ಯಾಲಿಫೋರ್ನಿಯಾದಲ್ಲಿ ನಡೆದ 10000 ಮೀ . ಓಟದಲ್ಲಿ ಗುಲ್ವೀರ್‌ ರಾಷ್ಟ್ರೀಯ ದಾಖಲೆ

| N/A | Published : Apr 01 2025, 12:48 AM IST / Updated: Apr 01 2025, 04:09 AM IST

ಸಾರಾಂಶ

  ಕ್ಯಾಲಿಫೋರ್ನಿಯಾದ ಸ್ಯಾನ್ ಜುವಾನ್ ಕ್ಯಾಪಿಸ್ಟ್ರಾನೊದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಕಾಂಟಿನೆಂಟಲ್‌ ಟೂರ್‌ನ 10000 ಮೀ. ಓಟದಲ್ಲಿ ಭಾರತದ ಗುಲ್ವೀರ್‌ ಸಿಂಗ್‌ 27 ನಿಮಿಷ 0.22 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.  

ನವದೆಹಲಿ: ಕ್ಯಾಲಿಫೋರ್ನಿಯಾದ ಸ್ಯಾನ್ ಜುವಾನ್ ಕ್ಯಾಪಿಸ್ಟ್ರಾನೊದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಕಾಂಟಿನೆಂಟಲ್‌ ಟೂರ್‌ನ 10000 ಮೀ. ಓಟದಲ್ಲಿ ಭಾರತದ ಗುಲ್ವೀರ್‌ ಸಿಂಗ್‌ 27 ನಿಮಿಷ 0.22 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಗುಲ್ವೀರ್‌ ಓಟವನ್ನು 6ನೇ ಸ್ಥಾನದೊಂದಿಗೆ ಅಂತ್ಯಗೊಳಿಸಿದರು.

ಆದರೆ ಈ ಹಿಂದೆ ತಮ್ಮ ಹೆಸರಿನಲ್ಲಿಯೇ ಇದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಗುಲ್ವೀರ್‌ ಕಳೆದ ವರ್ಷದ ನವೆಂಬರ್‌ನಲ್ಲಿ ಜಪಾನ್‌ನ ಹಚಿಯೋಜಿಯಲ್ಲಿ ನಡೆದ ಹ್ಯಾಂಗ್‌ಝೌ ಏಷ್ಯನ್ ಕ್ರೀಡಾಕೂಟದಲ್ಲಿ 27 ನಿಮಿಷ 14. 88 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿ ರಾಷ್ಟ್ರೀಯ ದಾಖಲೆ ಬರೆದಿದ್ದರು. 

ಸತತ 2ನೇ ಸೋಲುಂಡ ಸಿಎಸ್‌ಕೆ, ಹೈದ್ರಾಬಾದ್‌ವಿಶಾಖಪಟ್ಟಣಂ/ಗುವಾಹಟಿ: ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ 2ನೇ ಸೋಲುಂಡಿವೆ. ಭಾನುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ 7 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾದರೆ, ರಾಜಸ್ಥಾನ ರಾಯಲ್ಸ್‌ ವಿರುದ್ಧ ಚೆನ್ನೈ 6 ರನ್‌ ಸೋಲು ಕಂಡಿತು. 

ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ನೀಡಿದ 164 ರನ್‌ ಗುರಿಯನ್ನು ಡೆಲ್ಲಿ ಇನ್ನೂ 4 ಓವರ್‌ ಬಾಕಿ ಇರುವಂತೆ ಬೆನ್ನತ್ತಿ ಸತತ 2ನೇ ಜಯ ದಾಖಲಿಸಿತು. ಇನ್ನು, ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ 9 ವಿಕೆಟ್‌ಗೆ 182 ರನ್‌ ಗಳಿಸಿದರೆ, ಚೆನ್ನೈ 6 ವಿಕೆಟ್‌ಗೆ 176 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ರಾಯಲ್ಸ್‌ ಮೊದಲ ಜಯ ದಾಖಲಿಸಿತು.