ಇಂದಿನಿಂದ ಒಲಿಂಪಿಕ್ಸ್‌ ಅರ್ಹತಾ ಕುಸ್ತಿ: ಭಾರತದ 14 ಮಂದಿ ಸ್ಪರ್ಧೆ

| Published : May 09 2024, 01:06 AM IST / Updated: May 09 2024, 04:27 AM IST

ಇಂದಿನಿಂದ ಒಲಿಂಪಿಕ್ಸ್‌ ಅರ್ಹತಾ ಕುಸ್ತಿ: ಭಾರತದ 14 ಮಂದಿ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಗಿಟ್ಟಿಸಲು ಇದೇ ಕೊನೆ ಚಾನ್ಸ್‌. ಈ ವರೆಗೆ ಭಾರತದಿಂದ ಕೇವಲ 4 ಮಂದಿಗೆ ಮಾತ್ರ ಸಿಕ್ಕಿರುವ ಒಲಿಂಪಿಕ್ಸ್ ಕೋಟಾ. ಎಲ್ಲವೂ ಮಹಿಳಾ ವಿಭಾಗದಲ್ಲಿ.

ಇಸ್ತಾಂಬುಲ್‌(ಟರ್ಕಿ): ಪ್ಯಾರಿಸ್‌ ಒಲಿಂಪಿಕ್ಸ್‌ನ ವಿಶ್ವ ಅರ್ಹತಾ ಕುಸ್ತಿ ಚಾಂಪಿಯನ್‌ಶಿಪ್‌ ಗುರುವಾರದಿಂದ ಆರಂಭಗೊಳ್ಳಲಿದೆ. ಇದು ಈ ಬಾರಿ ಒಲಿಂಪಿಕ್ಸ್‌ ಕುಸ್ತಿಯ ಕೊನೆ ಅರ್ಹತಾ ಟೂರ್ನಿಯಾಗಿದ್ದು, 54 ಕೋಟಾಗಳು ಲಭ್ಯವಿದೆ.

 ಭಾರತದ 14 ಮಂದಿ ಕೂಟದಲ್ಲಿ ಸ್ಪರ್ಧಿಸಲಿದ್ದು, ಗರಿಷ್ಠ ಪ್ರಮಾಣದಲ್ಲಿ ಕೋಟಾ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.ಭಾರತದಿಂದ ಈ ವರೆಗೆ ವಿವಿಧ ಅರ್ಹತಾ ಕೂಟಗಳ ಮೂಲಕ ನಾಲ್ವರು ಮಹಿಳಾ ಕುಸ್ತಿಪಟುಗಳು ಒಲಿಂಪಿಕ್ಸ್‌ ಪ್ರವೇಶಿಸಿದ್ದಾರೆ. ಪುರುಷರು ಈ ವರೆಗೂ ಒಂದೂ ಕೋಟಾ ಗೆದ್ದಿಲ್ಲ. ಇತ್ತೀಚೆಗೆ ಕಜಕಸ್ತಾನದ ಬಿಷ್ಕೆಕ್‌ನಲ್ಲಿ ನಡೆದಿದ್ದ ಅರ್ಹತಾ ಟೂರ್ನಿಯಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿತ್ತು. 

ಮೇ 12ರ ವರೆಗೆ ನಡೆಯಲಿರುವ ಕೂಟದಲ್ಲಿ ಪುರುಷರ ಗ್ರೀಕೊ-ರೋಮನ್‌ ವಿಭಾಗದಲ್ಲಿ 6, ಫ್ರೀಸ್ಟೈಲ್‌ನಲ್ಲಿ 6, ಮಹಿಳಾ ಫ್ರೀಸ್ಟೈಲ್‌ನಲ್ಲಿ ಇಬ್ಬರು ಸ್ಪರ್ಧಿಸಲಿದ್ದಾರೆ. ಪುರುಷರ ಗ್ರೀಕೊ-ರೋಮನ್‌ ವಿಭಾಗದಲ್ಲಿ ಸುಮಿತ್‌ (60 ಕೆ.ಜಿ.), ಆಶು (67 ಕೆ.ಜಿ.), ವಿಕಾಸ್‌ (77 ಕೆ.ಜಿ.), ಸುನಿಲ್‌ ಕುಮಾರ್‌ (87 ಕೆ.ಜಿ.), ನಿತೇಶ್‌ (97 ಕೆ.ಜಿ.), ನವೀನ್‌ (130 ಕೆ.ಜಿ.), ಫ್ರೀಸ್ಟೈಲ್‌ನಲ್ಲಿ ಅಮನ್‌ (57 ಕೆ.ಜಿ.), ಸುಜೀತ್ (65 ಕೆ.ಜಿ.), ಜೈದೀಪ್‌ (74 ಕೆ.ಜಿ.), ದೀಪಕ್‌ ಪೂನಿಯಾ (86 ಕೆ.ಜಿ.), ದೀಪಕ್‌ (97 ಕೆ.ಜಿ.) ಹಾಗೂ ಸುಮಿತ್‌ (125 ಕೆ.ಜಿ.), ಮಹಿಳಾ ಫ್ರೀಸ್ಟೈಲ್‌ನಲ್ಲಿ ಮಾನ್ಶಿ (62 ಕೆ.ಜಿ.), ನಿಶಾ (68 ಕೆ.ಜಿ.) ಸ್ಪರ್ಧಿಸಲಿದ್ದಾರೆ.