ಸೂರ್ಯ, ರೌಫ್‌ಗೆ 30%ದಂಡ ವಿಧಿಸಿದ ಐಸಿಸಿ!

| Published : Sep 27 2025, 01:00 AM IST

ಸಾರಾಂಶ

ಭಾರತದ ನಾಯಕ ಸೂರ್ಯಕುಮಾರ್‌ಗೆ ಅಂ.ರಾ. ಕ್ರಿಕೆಟ್‌ ಸಮಿತಿ (ಐಸಿಸಿ) ಪಂದ್ಯದ ಸಂಭವಾನೆಯ ಶೇ.30ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದೆ. ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌ಗೂ ಪಂದ್ಯದ ಸಂಭಾವನೆಯ 30% ಮೊತ್ತವನ್ನು ದಂಡ ಹಾಕಿದೆ.

- ಪಹಲ್ಗಾಂ ದಾಳಿ ಬಗ್ಗೆ ಉಲ್ಲೇಖಿಸಿದ್ದಕ್ಕೆ ದಂಡ

- ‘ಗನ್‌ಶಾಟ್‌’ ಸಂಭ್ರಮ: ಫರ್ಹಾನ್‌ಗೆ ಎಚ್ಚರಿಕೆ

ದುಬೈ: ಪಾಕಿಸ್ತಾನ ವಿರುದ್ಧದ ಏಷ್ಯಾಕಪ್‌ ಗುಂಪು ಹಂತದ ಪಂದ್ಯ ಮುಗಿದ ಬಳಿಕ ಗೆಲುವನ್ನು ಪಹಲ್ಗಾಂ ಉಗ್ರ ದಾಳಿ ಸಂತ್ರಸ್ತರು ಹಾಗೂ ಭಾರತೀಯ ಸೇನೆಗೆ ಅರ್ಪಿಸಿದ್ದಕ್ಕೆ ಭಾರತದ ನಾಯಕ ಸೂರ್ಯಕುಮಾರ್‌ಗೆ ಅಂ.ರಾ. ಕ್ರಿಕೆಟ್‌ ಸಮಿತಿ (ಐಸಿಸಿ) ಪಂದ್ಯದ ಸಂಭವಾನೆಯ ಶೇ.30ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದೆ. ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌ಗೂ ಪಂದ್ಯದ ಸಂಭಾವನೆಯ 30% ಮೊತ್ತವನ್ನು ದಂಡ ಹಾಕಿದೆ. ತಮ್ಮ ವಿರುದ್ಧ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಬಿಸಿಸಿಐ ಮೇಲ್ಮನವಿ ಸಲ್ಲಿಸಿದೆ.

ಶುಕ್ರವಾರ ರೌಫ್‌ ಹಾಗೂ ಸಾಹಿಬ್‌ಝಾದಾ ಫರ್ಹಾನ್‌ ಐಸಿಸಿ ಮ್ಯಾಚ್‌ ರೆಫ್ರಿ ರಿಚಿ ರಿಚರ್ಡ್‌ಸನ್‌ ಎದುರು ವಿಚಾರಣೆಗೆ ಹಾಜರಾದರು. ಅರ್ಧಶತಕ ಬಾರಿಸಿದ ಬಳಿಕ ಗನ್‌ಶಾಟ್‌ ರೀತಿ ಸಂಭ್ರಮಿಸಿದ್ದ ಫರ್ಹಾನ್‌, ವಿಚಾರಣೆ ವೇಳೆ ತಾವು ತಪ್ಪು ಮಾಡಿಲ್ಲ. ತಮ್ಮ ದೇಶದ ಫಖ್ತೂನ್‌ ಭಾಗದಲ್ಲಿ ಸಂಭ್ರಮಿಸುವ ಪರಿ ಇದು ಎಂದು ಸಮರ್ಥನೆ ನೀಡಿದರು ಎಂದು ತಿಳಿದುಬಂದಿದೆ. ಈ ರೀತಿ ಸಂಭ್ರಮಾಚರಣೆಯನ್ನು ಮುಂದುವರಿಸದಂತೆ ಫರ್ಹಾನ್‌ಗೆ ಐಸಿಸಿ ಎಚ್ಚರಿಸಿದೆ.