ಇಗಾಗೆ ಚೊಚ್ಚಲ ವಿಂಬಲ್ಡನ್‌ ಕಿರೀಟ

| N/A | Published : Jul 13 2025, 01:18 AM IST / Updated: Jul 13 2025, 07:49 AM IST

ಇಗಾಗೆ ಚೊಚ್ಚಲ ವಿಂಬಲ್ಡನ್‌ ಕಿರೀಟ
Share this Article
  • FB
  • TW
  • Linkdin
  • Email

ಸಾರಾಂಶ

ಪೋಲೆಂಡ್‌ನ ತಾರಾ ಟೆನಿಸ್‌ ಆಟಗಾರ್ತಿ ಇಗಾ ಸ್ವಿಯಾಟೆಕ್‌ ಚೊಚ್ಚಲ ಬಾರಿಗೆ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ, ಅಮೆರಿಕದ ಅಮಾಂಡ ಅನಿಸಿಮೊವಾ ವಿರುದ್ಧ ಗ್ರ್ಯಾನ್‌ ಸ್ಲಾಂ ಜಯಿಸಿದರು.

ಲಂಡನ್‌: ಪೋಲೆಂಡ್‌ನ ತಾರಾ ಟೆನಿಸ್‌ ಆಟಗಾರ್ತಿ ಇಗಾ ಸ್ವಿಯಾಟೆಕ್‌ ಚೊಚ್ಚಲ ಬಾರಿಗೆ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ, ಅಮೆರಿಕದ ಅಮಾಂಡ ಅನಿಸಿಮೊವಾ ವಿರುದ್ಧ 6-0, 6-0 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ, ತಮ್ಮ ವೃತ್ತಿಬದುಕಿನ 6ನೇ ಗ್ರ್ಯಾನ್‌ ಸ್ಲಾಂ ಜಯಿಸಿದರು.

ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಇಗಾ ಸಂಪೂರ್ಣ ಪ್ರಾಬಲ್ಯ ಮೆರೆದರು. ಕೇವಲ 57 ನಿಮಿಷ ನಡೆದ ಪಂದ್ಯದಲ್ಲಿ 24 ವರ್ಷದ ಇಗಾ ಒಟ್ಟು 55 ಅಂಕ ಗಳಿಸಿದರೆ, ಚೊಚ್ಚಲ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ ಪ್ರವೇಶಿಸಿದ್ದ ಅಮಾಂಡ ಕೇವಲ 24 ಅಂಕ ಪಡೆಯಲಷ್ಟೇ ಶಕ್ತರಾದರು. ಅಲ್ಲದೇ ಅಮಾಂಡ 28 ಅನ್‌ಫೋರ್ಸ್ಡ್‌ ಎರರ್‌ಗಳನ್ನು ಮಾಡಿದ್ದು, ಅವರೆಷ್ಟು ಒತ್ತಡದಲ್ಲಿದ್ದರು ಎನ್ನುವುದಕ್ಕೆ ಸಾಕ್ಷಿ.

ಸ್ವಿಯಾಟೆಕ್‌ ಗ್ರ್ಯಾನ್‌ಸ್ಲಾಂ ಫೈನಲ್‌ಗಳಲ್ಲಿ ಅಜೇಯ ಓಟ ಮುಂದುವರಿಸಿದ್ದಾರೆ. ಅವರು ಒಟ್ಟು 6 ಬಾರಿ ಫೈನಲ್‌ನಲ್ಲಿ ಆಡಿದ್ದು, 6ರಲ್ಲೂ ಗೆದ್ದಿದ್ದಾರೆ.

ಸ್ವಿಯಾಟೆಕ್‌ 2020, 2022, 2023, 2024ರಲ್ಲಿ ಫ್ರೆಂಚ್‌ ಓಪನ್‌, 2022ರಲ್ಲಿ ಯುಎಸ್‌ ಓಪನ್‌ ಗೆದ್ದಿದ್ದರು. ಅವರು ಇನ್ನಷ್ಟೇ ಆಸ್ಟ್ರೇಲಿಯನ್‌ ಓಪನ್‌ ಗೆಲ್ಲಬೇಕಿದ್ದು, ಆ ಸಾಧನೆ ಮಾಡಿದರೆ ಕರಿಯರ್‌ ಸ್ಲ್ಯಾಂ ಪೂರ್ತಿಗೊಳ್ಳಲಿದೆ. ಟೆನಿಸ್‌ನ ಆಧುನಿಕ ಯುಗದಲ್ಲಿ ಮೊದಲ

ಸಲ 6-0, 6-0 ವಿಂಬಲ್ಡನ್‌ ಜಯ!

ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಫೈನಲ್‌ನಲ್ಲಿ ಸ್ವಿಯಾಟೆಕ್‌ಗೂ ಮುನ್ನ 6-0, 6-0 ಗೆಲುವು ಸಾಧಿಸಿದ್ದು ಬ್ರಿಟನ್‌ನ ಡೊರೊಥಿಯಾ ಲ್ಯಾಂಬೆರ್ಟ್‌. 1911ರಲ್ಲಿ ಅವರು ಬ್ರಿಟನ್‌ನವರೇ ಆದ ಡೊರಾ ಬೂಥ್‌ಬೈ ವಿರುದ್ಧ ಒಂದೂ ಗೇಮ್‌ ಸೋತಿರಲಿಲ್ಲ. ಟೆನಿಸ್‌ನ ಆಧುನಿಕ ಯುಗ (1968ರಿಂದ ಈಚೆಗೆ)ದಲ್ಲಿ ನಡೆದ ವಿಂಬಲ್ಡನ್‌ನ ಫೈನಲ್‌ಗಳಲ್ಲಿ 6-0, 6-0ಯಲ್ಲಿ ಗೆದ್ದ ಮೊದಲ ಆಟಗಾರ್ತಿ ಇಗಾ ಸ್ವಿಯಾಟೆಕ್‌. 34.75 ಕೋಟಿ ರು.ಚಾಂಪಿಯನ್‌ ಆದ ಸ್ವಿಯಾಟೆಕ್‌ಗೆ 30 ಲಕ್ಷ ಪೌಂಡ್‌ (ಅಂದಾಜು 34.75 ಕೋಟಿ ರು.) ಬಹುಮಾನ ಮೊತ್ತ ದೊರೆಯಿತು. 17.61 ಕೋಟಿ ರು.ರನ್ನರ್‌ ಅಪ್‌ ಆದ ಅಮಾಂಡಗೆ 15.2 ಲಕ್ಷ ಪೌಂಡ್‌ (ಅಂದಾಜು 17.61 ಕೋಟಿ ರು.) ಬಹುಮಾನ ಮೊತ್ತ ಸಿಕ್ಕಿತು.

Read more Articles on