ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ಹೈದ್ರಾಬಾದ್‌ vs ಜೈಂಟ್ಸ್‌ ಫೈಟ್‌

| Published : May 08 2024, 01:05 AM IST

ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ಹೈದ್ರಾಬಾದ್‌ vs ಜೈಂಟ್ಸ್‌ ಫೈಟ್‌
Share this Article
  • FB
  • TW
  • Linkdin
  • Email

ಸಾರಾಂಶ

11 ಪಂದ್ಯಗಳ ಪೈಕಿ ತಲಾ 6ರಲ್ಲಿ ಗೆದ್ದಿರುವ ಇತ್ತಂಡಗಳು. ಸೋಲುವ ತಂಡದ ಪ್ಲೇ-ಆಫ್‌ ಹಾದಿ ಮತ್ತಷ್ಟು ಕಠಿಣ. ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿತ.

ಹೈದರಾಬಾದ್‌: 17ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ ದಿನಕಳೆದಂತೆ ರೋಚಕತೆ ಸೃಷ್ಟಿಸುತ್ತಿದೆ. ಸದ್ಯ ಪ್ಲೇ-ಆಫ್‌ ಹಾದಿಯಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವ 2 ತಂಡಗಳಾದ ಸನ್‌ರೈಸರ್ಸ್‌ ಹೈದ್ರಾಬಾದ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ಬುಧವಾರ ಪರಸ್ಪರ ಸೆಣಸಾಡಲಿವೆ. ಪಂದ್ಯದಲ್ಲಿ ಗೆಲ್ಲುವ ತಂಡದ ನಾಕೌಟ್‌ ಹಾದಿ ಸುಗಮಗೊಳ್ಳಲಿದ್ದು, ಸೋಲುವ ತಂಡಕ್ಕೆ ಸಂಕಷ್ಟ ಎದುರಾಗಲಿದೆ.ಎರಡೂ ತಂಡಗಳು ಈ ಬಾರಿ ತಲಾ 11 ಪಂದ್ಯಗಳನ್ನಾಡಿದೆ. ತಲಾ 6 ಪಂದ್ಯಗಳಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ ನೆಟ್‌ ರನ್‌ರೇಟ್‌ ಆಧಾರದಲ್ಲಿ ಸನ್‌ರೈಸರ್ಸ್‌ ತಂಡ ಮುಂದಿದೆ.ಮೊದಲಾರ್ಧದಲ್ಲಿ ಸ್ಫೋಟಕ ಆಟವಾಡಿದ್ದ ಸನ್‌ರೈಸರ್ಸ್‌ ಈಗ ಅಸ್ಥಿರ ಪ್ರದರ್ಶನ ನೀಡುತ್ತಿದೆ. ಕಳೆದ 4 ಪಂದ್ಯಗಳ ಪೈಕಿ 3ರಲ್ಲಿ ಸೋತಿದ್ದು ತಂಡದ ಕಳಪೆ ಆಟಕ್ಕೆ ಹಿಡಿದ ಕೈಗನ್ನಡಿ. ತಂಡ ಲಖನೌ ವಿರುದ್ಧ ಸೇರಿ ಇನ್ನುಳಿದ ಎಲ್ಲಾ 3 ಪಂದ್ಯಗಳನ್ನು ತವರಿನಲ್ಲೇ ಆಡಲಿರುವುದು ಪ್ಲಸ್‌ ಪಾಯಿಂಟ್‌. ಆದರೆ ಲಖನೌ ವಿರುದ್ಧ ಐಪಿಎಲ್‌ನಲ್ಲಿ ಈ ವರೆಗೂ ಸನ್‌ರೈಸರ್ಸ್‌ ಗೆದ್ದಿಲ್ಲ.ಅತ್ತ ಲಖನೌ ಕೂಡಾ ಅಸ್ಥಿರ ಆಟಕ್ಕೆ ಹೆಸರುವಾಸಿ. ಪ್ರಮುಖವಾಗಿ ತಂಡದ ಬೌಲಿಂಗ್‌ ವಿಭಾಗ ಮೊನಚು ಕಳೆದುಕೊಂಡಿದೆ. ಕೆ.ಎಲ್‌.ರಾಹುಲ್‌, ಸ್ಟೋಯ್ನಿಸ್‌, ಕೃನಾಲ್‌ ಪಾಂಡ್ಯ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ.ಒಟ್ಟು ಮುಖಾಮುಖಿ: 03

ಹೈದ್ರಾಬಾದ್‌: 00ಲಖನೌ: 03

ಸಂಭವನೀಯರ ಪಟ್ಟಿ

ಹೈದ್ರಾಬಾದ್‌: ಅಭಿಷೇಕ್‌, ಹೆಡ್‌, ಮಯಾಂಕ್‌, ನಿತೀಶ್‌, ಕ್ಲಾಸೆನ್‌, ಸಮದ್‌, ಶಾಬಾಜ್‌, ಯಾನ್ಸನ್‌, ಕಮಿನ್ಸ್‌(ನಾಯಕ), ಭುವನೇಶ್ವರ್‌, ನಟರಾಜನ್‌.

ಲಖನೌ: ರಾಹುಲ್‌(ನಾಯಕ), ಸ್ಟೋಯ್ನಿಸ್‌, ಹೂಡಾ, ಪೂರನ್‌, ಟರ್ನರ್‌, ಬದೋನಿ, ಕೃನಾಲ್‌, ಬಿಷ್ಣೋಯ್, ನವೀನ್‌, ಮೊಹ್ಸಿನ್‌, ಯಶ್‌.

ಪಂದ್ಯ: ಸಂಜೆ 7.30ಕ್ಕೆ