ಸಾರಾಂಶ
ಸರಣಿಯಲ್ಲಿ ಭಾರತ ಬರೆದ ದಾಖಲೆಗಳು ಹಲವು. ಕೊನೆ ಪಂದ್ಯದ ಜಯದೊಂದಿಗೆ ಭಾರತ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿತು. ಟೆಸ್ಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಕೇವಲ 3ನೇ ತಂಡ ಹೆಗ್ಗಳಿಕೆಗೆ ಪಾತ್ರವಾಯಿತು.
ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ಕೊನೆ ಪಂದ್ಯದ ಜಯದೊಂದಿಗೆ ಭಾರತ ಹೊಸ ದಾಖಲೆ ಬರೆಯಿತು. ಕಳೆದ 112 ವರ್ಷಗಳಲ್ಲೇ ಮೊದಲ ಪಂದ್ಯದ ಸೋಲಿನ ಬಳಿಕ 5 ಪಂದ್ಯದ ಸರಣಿಯಲ್ಲಿ 4-1ರಿಂದ ಗೆದ್ದ ಏಕೈಕ ತಂಡ ಎನಿಸಿಕೊಂಡಿತು.
ಈ ಮೊದಲು ಈ ಸಾಧನೆ ಮಾಡಿದ್ದು ಕೇವಲ 2 ತಂಡಗಳು. 1897-98 ಮತ್ತು 1901-02ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ, 1912ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಈ ಸಾಧನೆ ಮಾಡಿತ್ತು.100 ಸಿಕ್ಸರ್: ಹೊಸ ದಾಖಲೆ
ಇಂಗ್ಲೆಂಡ್‌ನ ಬಾಜ್‌ಬಾಲ್, ಭಾರತದ ಜೈಸ್‌ಬಾಲ್ ಆಟಕ್ಕೆ ಸಾಕ್ಷಿಯಾದ ಸರಣಿ ಸಿಕ್ಸರ್‌ನಲ್ಲೂ ಹೊಸ ಇತಿಹಾಸ ಸೃಷ್ಟಿಸಿತು. ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲೇ 100+ ಸಿಕ್ಸರ್ ದಾಖಲಾದ ಏಕೈಕ ಸರಣಿ ಎಂಬ ಹೆಗ್ಗಳಿಕೆಗೆ ಈ ಸರಣಿ ಪಾತ್ರವಾಯಿತು.ಕುಂಬ್ಳೆಯ ಮತ್ತೊಂದು ದಾಖಲೆ ಮುರಿದ ಅಶ್ವಿನ್ಭಾರತ ಪರ ಟೆಸ್ಟ್‌ನಲ್ಲಿ ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧಕರ ಪಟ್ಟಿಯಲ್ಲಿ ಆರ್.ಅಶ್ವಿನ್ , ಅನಿಲ್ ಕುಂಬ್ಳೆ(35 ಬಾರಿ) ಅವರನ್ನು ಹಿಂದಿಕ್ಕಿದರು.
ಅಶ್ವಿನ್ 36 ಬಾರಿ 5+ ವಿಕೆಟ್ ಕಿತ್ತಿದ್ದು, ಭಾರತೀಯರ ಪೈಕಿ ನಂ.1, ಒಟ್ಟಾರೆ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ 3ನೇ ಸ್ಥಾನಕ್ಕೇರಿದ್ದಾರೆ. ಲಂಕಾದ ಮುರಳೀಧರನ್ 67, ಆಸೀಸ್‌ನ ಶೇನ್ ವಾರ್ನ್ 37, ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ 36 ಬಾರಿ ಈ ಸಾಧನೆ ಮಾಡಿದ್ದಾರೆ.02ನೇ ಆಟಗಾರ: 100ನೇ ಟೆಸ್ಟ್ ಪಂದ್ಯದಲ್ಲಿ 5+ ವಿಕೆಟ್ ಕಿತ್ತ 2ನೇ ಭಾರತೀಯ ಅಶ್ವಿನ್. ಕುಂಬ್ಳೆ ಮೊದಲಿಗರು.01ನೇ ಬೌಲರ್: ಚೊಚ್ಚಲ ಮತ್ತು 100ನೇ ಟೆಸ್ಟ್‌ನಲ್ಲಿ 5+ ವಿಕೆಟ್ ಕಿತ್ತ ವಿಶ್ವದ ಏಕೈಕ ಬೌಲರ್ ಅಶ್ವಿನ್.