ಸಾರಾಂಶ
9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಅಖಾಡ ಸಿದ್ಧವಾಗಿದೆ. ಮಾ.9ರಂದು ದುಬೈನಲ್ಲಿ ನಡೆಯಲಿರುವ ಈ ಬಾರಿ ಟೂರ್ನಿಯ ಪ್ರಶಸ್ತಿ ಕದನದಲ್ಲಿ ಮಾಜಿ ಚಾಂಪಿಯನ್‌ಗಳಾದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.
ಲಾಹೋರ್: 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಅಖಾಡ ಸಿದ್ಧವಾಗಿದೆ. ಮಾ.9ರಂದು ದುಬೈನಲ್ಲಿ ನಡೆಯಲಿರುವ ಈ ಬಾರಿ ಟೂರ್ನಿಯ ಪ್ರಶಸ್ತಿ ಕದನದಲ್ಲಿ ಮಾಜಿ ಚಾಂಪಿಯನ್‌ಗಳಾದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ. ಭಾರತ ತಂಡ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು.
ಬುಧವಾರ ಲಾಹೋರ್ ಕ್ರೀಡಾಂಗಣದಲ್ಲಿ ನಡೆದ 2ನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ 00 ರನ್ ಗೆಲುವು ಸಾಧಿಸಿತು. ಇದರೊಂದಿಗೆ ನ್ಯೂಜಿಲೆಂಡ್ 3ನೇ ಬಾರಿ ಫೈನಲ್ ಪ್ರವೇಶಿಸಿದರೆ, ಚೋಕರ್ಸ್ ಹಣೆಪಟ್ಟಿ ಇರುವ ದ.ಆಫ್ರಿಕಾ ತಂಡದ 2ನೇ ಫೈನಲ್ ಕನಸು ಭಗ್ನಗೊಂಡಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ಕೇನ್ ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ ಶತಕದ ನೆರವಿನಿಂದ 6 ವಿಕೆಟ್‌ಗೆ 362 ರನ್ ಕಲೆಹಾಕಿತು. ದ.ಆಫ್ರಿಕಾದ ಆರಂಭ ಉತ್ತಮವಾಗಿದ್ದರೂ, ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಹೀಗಾಗಿ ದೊಡ್ಡ ಮೊತ್ತ ಬೆನ್ನತ್ತಲಾಗದೆ ದ.ಆಫ್ರಿಕಾ ಸೋಲೊಪ್ಪಿಕೊಂಡಿತು. ತಂಡ -00 ಓವರ್‌ಗಳಲ್ಲಿ 00 ರನ್‌ಗೆ ಆಲೌಟಾಯಿತು.
ರಿಕೆಲ್ಟನ್ 17 ರನ್‌ಗೆ ಔಟಾದ ಬಳಿಕ ತೆಂಬಾ ಬವುಮಾ-ವ್ಯಾನ್ ಡರ್ ಡಸೆನ್ 2ನೇ ವಿಕೆಟ್‌ಗೆ 105 ರನ್ ಜೊತೆಯಾಟವಾಡಿದರು. 23ನೇ ಓವರ್‌ನಲ್ಲಿ ಬವುಮಾ(56 ರನ್) ಹಾಗೂ 27ನೇ ಓವರ್‌ನಲ್ಲಿ ಡಸೆನ್(69 ರನ್)ರನ್ನು ಪೆವಿಲಿಯನ್‌ಗೆ ಅಟ್ಟಿದ ಕಿವೀಸ್ ನಾಯಕ ಸ್ಯಾಂಟ್ನರ್, ತಂಡದ ಗೆಲುವಿಗೆ ನಾಂದಿ ಹಾಡಿದರು. 29ನೇ ಓವರ್‌ನಲ್ಲಿ ಸ್ಯಾಂಟ್ನರ್ ಎಸೆತದಲ್ಲಿ ಅಪಾಯಕಾರಿ ಕ್ಲಾಸೆನ್ ಔಟಾಗುವುದರೊಂದಿಗೆ ದ.ಆಫ್ರಿಕಾ ಸೋಲಿನತ್ತ ಮುಖಮಾಡಿತು. ಬಳಿಕ ಮಾರ್ಕರ್‌ಮ್ 31, ಡೇವಿಡ್ ಮಿಲ್ಲರ್ 000 ರನ್ ಗಳಿಸಿದರೂ, ತಂಡವನ್ನು ಗೆಲ್ಲಿಸಲಾಗಲಿಲ್ಲ. ಸ್ತಾಂಟ್ನರ್ 3 ವಿಕೆಟ್ ಕಿತ್ತರು.
ರಚಿನ್, ಕೇನ್ ಅಬ್ಬರ: ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀಸ್‌ಗೆ ರಚಿನ್-ಕೇನ್ ಆಸರೆಯಾದರು. ಈ ಜೋಡಿ 2ನೇ ವಿಕೆಟ್‌ಗೆ 164 ರನ್ ಸೇರಿಸಿತು. ರಚಿನ್ 101 ಎಸೆತಗಳಲ್ಲಿ 108, ವಿಲಿಯಮ್ಸನ್ 94 ಎಸೆತಗಳಲ್ಲಿ 102 ರನ್ ಸಿಡಿಸಿದರು. ಬಳಿಕ ಡ್ಯಾರಿಲ್ ಮಿಚೆಲ್ 37 ಎಸೆತಗಳಲ್ಲಿ 49, ಗ್ಲೆನ್ ಫಿಲಿಪ್ಸ್ 27 ಎಸೆತಗಳಲ್ಲಿ ಔಟಾಗದೆ 49 ರನ್ ಸಿಡಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.
ಸ್ಕೋರ್: ನ್ಯೂಜಿಲೆಂಡ್ 50 ಓವರಲ್ಲಿ 362/6 (ರಚಿನ್ 108, ಕೇನ್ 102, ಫಿಲಿಪ್ಸ್ ಔಟಾಗದೆ 49, ಡ್ಯಾರಿಲ್ 49, ಎನ್‌ಗಿಡಿ 3-72), ದ.ಆಫ್ರಿಕಾ 000 ಓವರಲ್ಲಿ 000 (ಡಸೆನ್ 69, ಬವುಮಾ 56, ಸ್ಯಾಂಟ್ನರ್ 000)
25 ವರ್ಷಗಳ ಬಳಿಕ ಮತ್ತೆ
ಫೈನಲಲ್ಲಿ ಭಾರತ-ಕಿವೀಸ್
ಭಾರತ-ನ್ಯೂಜಿಲೆಂಡ್ ತಂಡಗಳು ಬರೋಬ್ಬರಿ 25 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಮೊದಲು 2000ರಲ್ಲಿ ಉಭಯ ತಂಡಗಳು ಫೈನಲ್‌ನಲ್ಲಿ ಆಡಿದ್ದವು. ನ್ಯೂಜಿಲೆಂಡ್ 4 ವಿಕೆಟ್‌ಗಳಿಂದ ಗೆದ್ದಿತ್ತು.
16 ವರ್ಷಗಳ ಕಾಯುವಿಕೆ
ಬಳಿಕ ಕಿವೀಸ್ ಫೈನಲ್‌ಗೆ
ನ್ಯೂಜಿಲೆಂಡ್ 16 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿವೆ. 2009ರಲ್ಲಿ ಫೈನಲ್‌ಗೇರಿದ್ದ ತಂಡ, ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
05 ಶತಕ
ರಚಿನ್ ಏಕದಿನದಲ್ಲಿ 5ನೇ ಶತಕ ಬಾರಿಸಿದರು. ಎಲ್ಲಾ ಶತಕಗಳು ಐಸಿಸಿ ಟೂರ್ನಿಗಳಲ್ಲಿ ಹೊಡೆದಿರುವುದು ವಿಶೇಷ.
08 ಆಟಗಾರ
ಚಾಂಪಿಯನ್ಸ್ ಟ್ರೋಫಿ ಆವೃತ್ತಿಯಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ಶತಕ ಬಾರಿಸಿದ 8ನೇ ಆಟಗಾರ ರಚಿನ್.
;Resize=(690,390))
;Resize=(128,128))
;Resize=(128,128))