ಮೊದಲ ಟಿ20: ಬಾಂಗ್ಲಾ ವಿರುದ್ಧ ಭಾರತ ಮಹಿಳೆಯರ ಶುಭಾರಂಭ

| Published : Apr 29 2024, 01:36 AM IST / Updated: Apr 29 2024, 04:24 AM IST

ಸಾರಾಂಶ

ವೇಗಿ ರೇಣುಕಾ ಸಿಂಗ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2ನೇ ಪಂದ್ಯ ಮಂಗಳವಾರ ನಡೆಯಲಿದೆ.

ಸೈಲೆಟ್‌(ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 44 ರನ್‌ ಗೆಲುವು ಸಾಧಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ ಕಳೆದುಕೊಂಡು 145 ರನ್‌ ಕಲೆಹಾಕಿತು. 

ಯಸ್ತಿಕಾ ಭಾಟಿಯಾ 36, ಶಫಾಲಿ ವರ್ಮಾ 31, ಹರ್ಮನ್‌ಪ್ರೀತ್‌ ಕೌರ್‌ 30, ರಿಚಾ ಘೋಷ್‌ 23 ರನ್‌ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿ ಬಾಂಗ್ಲಾದೇಶ ತಂಡ ಭಾರತದ ಮಾರಕ ದಾಳಿಗೆ ತುತ್ತಾಗಿ 20 ಓವರಲ್ಲಿ 8 ವಿಕೆಟ್‌ಗೆ 101 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಿಗಾರ್‌ ಸುಲ್ತಾನ(51) ಹೋರಾಟ ವ್ಯರ್ಥವಾಯಿತು. ವೇಗಿ ರೇಣುಕಾ ಸಿಂಗ್‌ 18ಕ್ಕೆ 3 ವಿಕೆಟ್‌ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2ನೇ ಪಂದ್ಯ ಮಂಗಳವಾರ ನಡೆಯಲಿದೆ.

ಪಾಕಿಸ್ತಾನ-ನ್ಯೂಜಿಲೆಂಡ್‌ ಟಿ20 ಸರಣಿ 2-2ರಲ್ಲಿ ಅಂತ್ಯ

ಲಾಹೋರ್‌: ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ನಡುವಿನ 5 ಪಂದ್ಯಗಳ ಟಿ20 ಸರಣಿ 2-2ರಲ್ಲಿ ಅಂತ್ಯಗೊಂಡಿದೆ. ಶನಿವಾರ ರಾತ್ರಿ ನಡೆದ ಕೊನೆ ಟಿ20 ಪಂದ್ಯದಲ್ಲಿ ಪಾಕ್‌ 9 ರನ್ ರೋಚಕ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಪಾಕ್‌, ನಾಯಕ ಬಾಬರ್‌ ಆಜಂ(69), ಫಾಕರ್‌ ಜಮಾನ್‌(43) ಹೋರಾಟದಿಂದಾಗಿ 20 ಓವರಲ್ಲಿ 5 ವಿಕೆಟ್‌ಗೆ 178 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 19.2 ಓವರ್‌ಗಳಲ್ಲಿ 169ಕ್ಕೆ ಸರ್ವಪತನ ಕಂಡಿತು. ಟಿಮ್‌ ಸೀಫರ್ಟ್‌(52) ಹೋರಾಟ ವ್ಯರ್ಥವಾಯಿತು. ಶಾಹೀನ್‌ ಅಫ್ರಿದಿ 4 ವಿಕೆಟ್‌ ಕಿತ್ತರು.