ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿ ಗೆದ್ದ ಟೀಮ್‌ ಇಂಡಿಯಾ

| Published : Jun 02 2024, 01:45 AM IST / Updated: Jun 02 2024, 04:09 AM IST

ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿ ಗೆದ್ದ ಟೀಮ್‌ ಇಂಡಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ರಿಷಭ್‌ ಪಂತ್‌, ಹಾರ್ದಿಕ್‌, ಅರ್ಶ್‌ದೀಪ್‌ ಮಿಂಚು. ಹಾರ್ದಿಕ್‌ ಪಾಂಡ್ಯ 23 ಎಸೆತಗಳಲ್ಲಿ 40 ರನ್‌ ಸಿಡಿಸಿದರೆ, ಸೂರ್ಯಕುಮಾರ್‌ ಯಾದವ್‌ 18 ಎಸೆತಗಳಲ್ಲಿ 31 ರನ್‌ ಗಳಿಸಿದರು.

ನ್ಯೂಯಾರ್ಕ್‌: ಈ ಬಾರಿ ಟಿ20 ವಿಶ್ವಕಪ್‌ಗೆ ಮಾಜಿ ಚಾಂಪಿಯನ್‌ ಭಾರತ ಭರ್ಜರಿ ತಯಾರಿ ನಡೆಸಿದೆ. ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ರೋಹಿತ್‌ ಶರ್ಮಾ ಪಡೆ 62 ರನ್‌ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 5 ವಿಕೆಟ್‌ ಕಳೆದುಕೊಂಡು 185 ರನ್‌ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್‌ 1 ರನ್‌ ಗಳಿಸಲು 6 ಎಸೆತಗಳನ್ನು ತೆಗೆದುಕೊಂಡರು. ಆದರೆ 17 ತಿಂಗಳ ಬಳಿಕ ಭಾರತ ತಂಡಕ್ಕೆ ಮರಳಿದ ರಿಷಭ್‌ ಪಂತ್‌ 32 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 53 ರನ್‌ ಸಿಡಿಸಿ ಸ್ವಯಂ ನಿವೃತ್ತಿ ಪಡೆದರು. 

ಐಪಿಎಲ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡಿದ್ದ ಹಾರ್ದಿಕ್‌ ಪಾಂಡ್ಯ 23 ಎಸೆತಗಳಲ್ಲಿ 40 ರನ್‌ ಸಿಡಿಸಿದರೆ, ಸೂರ್ಯಕುಮಾರ್‌ ಯಾದವ್‌ 18 ಎಸೆತಗಳಲ್ಲಿ 31 ರನ್‌ ಗಳಿಸಿದರು. ರೋಹಿತ್‌ 23 ರನ್ ಕೊಡುಗೆ ನೀಡಿದರು.ದೊಡ್ಡ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಆರಂಭಿಕ ಆಘಾತಕ್ಕೆ ತುತ್ತಾಗಿ, 20 ಓವರ್‌ಗಳಲ್ಲಿ 8 ವಿಕೆಟ್‌ಗೆ 120 ರನ್ ಗಳಿಸಿ ಸೋಲೊಪ್ಪಿಕೊಂಡಿತು. 

10 ರನ್‌ಗೆ 3 ವಿಕೆಟ್‌ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲಿಲ್ಲ. ಕೊನೆಯಲ್ಲಿ ಮಹ್ಮೂದುಲ್ಲಾ(40), ಶಕೀಬ್‌(28) ಅಲ್ಪ ಹೋರಾಟ ನಡೆಸಿ ಸೋಲಿನ ಅಂತರ ತಗ್ಗಿಸಿದರು. ಅರ್ಶ್‌ದೀಪ್‌ ಸಿಂಗ್‌ 2 ವಿಕೆಟ್‌ ಕಿತ್ತರು. ಸ್ಕೋರ್‌: ಭಾರತ 20 ಓವರಲ್ಲಿ 182/5(ರಿಷಭ್‌ 53, ಹಾರ್ದಿಕ್‌ 40, ಸೂರ್ಯ 31, ಮಹ್ಮೂದುಲ್ಲಾ 1-16), ಬಾಂಗ್ಲಾ 20 ಓವರಲ್ಲಿ 120/8 (ಮಹ್ಮೂದುಲ್ಲಾ 40, ಶಕೀಬ್‌ 28, ಅರ್ಶ್‌ದೀಪ್‌ 2-12)