ಸಾರಾಂಶ
ಅಹಮದಾಬಾದ್: ದೀಪ್ತಿ ಶರ್ಮಾ ಆಲ್ರೌಂಡ್ ಆಟ, ಬೌಲರ್‌ಗಳ ಮೊನಚು ದಾಳಿ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 59 ರನ್ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.ಮೊದಲು ಬ್ಯಾಟ್ ಮಾಡಿದ ಭಾರತ 44.3 ಓವರ್‌ಗಳಲ್ಲಿ 227 ರನ್‌ಗೆ ಆಲೌಟಾಯಿತು.
ಚೊಚ್ಚಲ ಪಂದ್ಯವಾಡಿದ ತೇಜಲ್ ಹಸಬ್ನಿಸ್ 42, ದೀಪ್ತಿ ಶರ್ಮಾ 41, ಯಸ್ತಿಕಾ ಭಾಟಿಯಾ 37, ಜೆಮಿಮಾ 35, ಶಫಾಲಿ ವರ್ಮಾ 33 ರನ್ ಸಿಡಿಸಿದರು. ನಾಯಕಿ ಸ್ಮೃತಿ ಮಂಧನಾ ಕೇವಲ 5 ರನ್ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕಿವೀಸ್ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ 40.4 ಓವರ್‌ಗಳಲ್ಲಿ 168 ರನ್‌ಗೆ ಆಲೌಟಾಯಿತು. ಬ್ರೂಕ್ ಹಾಲಿಡೆ(39) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಕಲೆಹಾಕಿದರು.
ರಾಧಾ ಯಾದವ್ 3, ಸೈಮಾ ಠಾಕೂರ್ 2, ದೀಪ್ತಿ, ಅರುಂಧತಿ ತಲಾ 1 ವಿಕೆಟ್ ಕಿತ್ತರು. 2ನೇ ಏಕದಿನ ಅ.27ಕ್ಕೆ ನಡೆಯಲಿದೆ.ಸ್ಕೋರ್: ಭಾರತ 44.3 ಓವರಲ್ಲಿ 227/10 (ತೇಜಲ್ 42, ದೀಪ್ತಿ 42, ಅಮೇಲಿ 4-42), ನ್ಯೂಜಿಲೆಂಡ್ 40.4 ಓವರಲ್ಲಿ 168/10 (ಬ್ರೂಕ್ 39, ರಾಧಾ 3-35, ಸೈಮಾ 2-26) ಪಂದ್ಯಶ್ರೇಷ್ಠ: ದೀಪ್ತಿ ಶರ್ಮಾ