ಮ್ಯಾಂಚೆಸ್ಟರಲ್ಲಿ ಭಾರತದ ಬೆಂಡೆತ್ತಿದ ಇಂಗ್ಲೆಂಡ್‌!

| N/A | Published : Jul 26 2025, 10:46 AM IST

India Day 3 Manchester Test
ಮ್ಯಾಂಚೆಸ್ಟರಲ್ಲಿ ಭಾರತದ ಬೆಂಡೆತ್ತಿದ ಇಂಗ್ಲೆಂಡ್‌!
Share this Article
  • FB
  • TW
  • Linkdin
  • Email

ಸಾರಾಂಶ

4ನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯರ ಬ್ಯಾಟಿಂಗ್‌ ವೈಭವ : ಪಂದ್ಯದ ಮೇಲೆ ಬಿಗಿ ಹಿಡಿತ । 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 499 ರನ್‌ಮೊದಲ ಇನ್ನಿಂಗ್ಸ್‌ನಲ್ಲಿ 200 ರನ್‌ ಮುನ್ನಡೆ । ಜೋ ರೂಟ್‌ 150, ಪೋಪ್‌ 71, ಸ್ಟೋಕ್ಸ್‌ 66 । ಸರಣಿ ಸೋಲಿನ ಭೀತಿಯಲ್ಲಿ ಭಾರತ

ಮ್ಯಾಂಚೆಸ್ಟರ್: ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿರುವ 4ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಸಂಪೂರ್ಣ ಹಿಡಿತ ಸಾಧಿಸಿದೆ. ತನ್ನ ಬ್ಯಾಟಿಂಗ್‌ ಪರಾಕ್ರಮ ಮುಂದುವರಿಸಿದ ತಂಡ ಇನ್ನಿಂಗ್ಸ್‌ ಗೆಲುವಿನ ಮೇಲೆ ಕಣ್ಣಿಟ್ಟಿದೆ. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 00 ರನ್‌ ಮುನ್ನಡೆ ಪಡೆದಿದ್ದು, ಶನಿವಾರ ಮತ್ತಷ್ಟು ರನ್‌ ಸೇರಿಸುವ ಯೋಜನೆ ಹಾಕಿಕೊಂಡಿದೆ.

2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 215 ರನ್‌ ಗಳಿಸಿದ್ದ ಇಂಗ್ಲೆಂಡ್‌ ಶುಕ್ರವಾರವೂ ಅಧಿಪತ್ಯ ಸಾಧಿಸಿತು. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 3ನೇ ದಿನದ ಅಂತ್ಯಕ್ಕೆ 0 ವಿಕೆಟ್‌ಗೆ 000 ರನ್‌ ಕಲೆಹಾಕಿದೆ. ಶುಕ್ರವಾರ ಆರಂಭಿಕರ ಅಬ್ಬರಕ್ಕೆ ಸಾಕ್ಷಿಯಾದ ಮ್ಯಾಂಚೆಸ್ಟರ್‌ನಲ್ಲಿ ಶನಿವಾರ ಜೋ ರೂಟ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದರು.

ದಿನದ ಮೊದಲ ಅವಧಿಯಲ್ಲಿ ರೂಟ್‌-ಓಲಿ ಪೋಪ್‌ ಅಬ್ಬರಿಸಿದರು. ಈ ಜೋಡಿ 3ನೇ ವಿಕೆಟ್‌ಗೆ 144 ರನ್‌ ಸೇರಿಸಿತು. ಹಲವು ದಿಗ್ಗಜರನ್ನು ಹಿಂದಿಕ್ಕಿ ಟೆಸ್ಟ್‌ನಲ್ಲಿ ಗರಿಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ರೂಟ್‌, 38ನೇ ಶತಕದೊಂದಿಗೆ ಸಂಭ್ರಮಿಸಿದರು. ಈ ನಡುವೆ ಪೋಪ್‌ 71 ರನ್‌ ಗಳಿಸಿ ಔಟಾದರು. ಹ್ಯಾರಿ ಬ್ರೂಕ್‌(3) ಮಿಂಚಲಿಲ್ಲ.ಬಳಿಕ ರೂಟ್‌ಗೆ ಜೊತೆಯಾಗಿದ್ದು ನಾಯಕ ಬೆನ್‌ ಸ್ಟೋಕ್ಸ್‌. ಈ ಜೋಡಿ 6ನೇ ವಿಕೆಟ್‌ಗೆ 142 ರನ್‌ ಜೊತೆಯಾಟವಾಡಿತು. ಭಾರತೀಯ ಬೌಲರ್‌ಗಳ ಬೆಂಡೆತ್ತಿದ ಈ ಜೋಡಿ ತಂಡಕ್ಕೆ ಇನ್ನಿಂಗ್ಸ್‌ ಮುನ್ನಡೆ ಒದಗಿಸಿಕೊಟ್ಟಿತು. 66 ರನ್‌ ಗಳಿಸಿದ್ದಾಗ ಸ್ಟೋಕ್ಸ್‌ ಗಾಯಗೊಂಡು ಮೈದಾನ ತೊರೆದರು. ಇದರ ಬೆನ್ನಲ್ಲೇ ಜೋ ರೂಟ್‌, ಜಡೇಜಾರ ಎಸೆತದಲ್ಲಿ ಸ್ಟಂಪೌಟ್‌ ಆಗಿ ನಿರ್ಗಮಿಸಿದರು. ಅವರು 248 ಎಸೆತಗಳನ್ನು ಎದುರಿಸಿ 150 ರನ್‌ ಸಿಡಿಸಿದರು.

ಸದ್ಯ ಲಿಯಾಮ್‌ ಡಾವ್ಸನ್‌ ಹಾಗೂ ಕ್ರಿಸ್‌ ವೋಕ್ಸ್‌ ಕ್ರೀಸ್‌ನಲ್ಲಿದ್ದು, 4ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಜಡೇಜಾ, ವಾಷಿಂಗ್ಟನ್‌ ಸುಂದರ್ ತಲಾ 2 ವಿಕೆಟ್‌ ಪಡೆದರು.

ಸ್ಕೋರ್: ಭಾರತ 358/10, ಇಂಗ್ಲೆಂಡ್‌ 0000 (3ನೇ ದಿನದಂತ್ಯಕ್ಕೆ) (ರೂಟ್‌ 150, ಪೋಪ್‌ 71, ಸ್ಟೋಕ್ಸ್‌ 66*, ವಾಷಿಂಗ್ಟನ್‌ 000, ಜಡೇಜಾ 0000)

21 ಶತಕ

ರೂಟ್‌ 2021ರ ಬಳಿಕ ಟೆಸ್ಟ್‌ನಲ್ಲಿ 21 ಶತಕ ಬಾರಿಸಿದ್ದಾರೆ. ಇದು ಗರಿಷ್ಠ. ಸ್ಟೀವ್‌ ಸ್ಮಿತ್‌, ವಿಲಿಯಮ್ಸನ್‌ ಈ ಅವಧಿಯಲ್ಲಿ ತಲಾ 10 ಶತಕ ಗಳಿಸಿದ್ದಾರೆ.

09 ಶತಕ

ರೂಟ್‌ ಭಾರತ ವಿರುದ್ಧ ತವರಿನ ಟೆಸ್ಟ್‌ನಲ್ಲಿ 9 ಶತಕ ಬಾರಿಸಿದ್ದಾರೆ. ಯಾವುದೇ ತಂಡದ ವಿರುದ್ಧ ತವರಿನ ಟೆಸ್ಟ್‌ನಲ್ಲಿ ಆಟಗಾರ ಬಾರಿಸಿದ ಗರಿಷ್ಠ ಶತಕ ಇದು.

23 ಸೆಂಚುರಿ

ರೂಟ್‌ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ 23 ಶತಕ ಸಿಡಿಸಿದ್ದಾರೆ. ಪಾಂಟಿಂಗ್‌, ಕ್ಯಾಲಿಸ್‌, ಜಯವರ್ಧನೆ ಕೂಡಾ ತಮ್ಮ ತಮ್ಮ ತವರಿನಲ್ಲಿ ತಲಾ 23 ಶತಕ ಬಾರಿಸಿದ್ದಾರೆ.

 

Read more Articles on