ಅಂಡರ್‌-19 ಟಿ20 ವಿಶ್ವಕಪ್‌: ಭಾರತಕ್ಕೆ ರಾಜ್ಯದ ನಿಕಿ ನಾಯಕಿ

| Published : Dec 25 2024, 12:47 AM IST

ಅಂಡರ್‌-19 ಟಿ20 ವಿಶ್ವಕಪ್‌: ಭಾರತಕ್ಕೆ ರಾಜ್ಯದ ನಿಕಿ ನಾಯಕಿ
Share this Article
  • FB
  • TW
  • Linkdin
  • Email

ಸಾರಾಂಶ

ಕಿರಿಯರ ಟಿ20 ವಿಶ್ವಕಪ್‌:ಭಾರತ ತಂಡಕ್ಕೆ ರಾಜ್ಯದನಿಕಿ ಪ್ರಸಾದ್‌ ನಾಯಕಿ

ನವದೆಹಲಿ: ಜ.18ರಿಂದ ಫೆ.2ರ ವರೆಗೂ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ನಿಕಿ ಪ್ರಸಾದ್‌ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಇತ್ತೀಚೆಗಷ್ಟೇ ನಿಕಿ ಅವರ ನಾಯಕತ್ವದಲ್ಲಿ ಭಾರತ ತಂಡ ಅಂಡರ್‌-19 ಏಷ್ಯಾಕಪ್‌ ಟಿ20 ಟೂರ್ನಿಯನ್ನು ಗೆದ್ದಿತ್ತು.

ಆ ತಂಡದಲ್ಲಿದ್ದ ರಾಜ್ಯದ ಮತ್ತೊಬ್ಬ ಆಟಗಾರ್ತಿ ಮಿಥಿಲಾ ವಿನೋದ್‌ ಸಹ ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಭಾರತ ತಂಡ ‘ಎ’ ಗುಂಪಿನಲ್ಲಿ ಮಲೇಷ್ಯಾ, ವಿಂಡೀಸ್‌, ಶ್ರೀಲಂಕಾ ಜೊತೆ ಸ್ಥಾನ ಪಡೆದಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜ.19ರಂದು ವಿಂಡೀಸ್‌ ವಿರುದ್ಧ ಆಡಲಿದೆ.