ಸಾರಾಂಶ
ಪ್ಯಾರಿಸ್: ಭಾರತ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 6 ಪದಕಗಳನ್ನು ಗೆದ್ದಿದ್ದು, ಪಟ್ಟಿಯಲ್ಲಿ 71ನೇ ಸ್ಥಾನ ಪಡೆದುಕೊಂಡಿತು. ಇದು ಕಳೆದ 24 ವರ್ಷಗಳಲ್ಲೇ ಭಾರತದ ಕಳಪೆ ಸಾಧನೆ. 1996 ಹಾಗೂ 2000ರಲ್ಲಿ 71ನೇ ಸ್ಥಾನಿಯಾಗಿದ್ದ ಭಾರತ, 2004ರಲ್ಲಿ 65, 2008ರಲ್ಲಿ 50 ಹಾಗೂ 2012ರಲ್ಲಿ 55ನೇ ಸ್ಥಾನ ಪಡೆದಿತ್ತು. ಬಳಿಕ 2016ರಲ್ಲಿ 67 ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 48ನೇ ಸ್ಥಾನಿಯಾಗಿತ್ತು.
ಭಾರತ ಈ ಬಾರಿ 1 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಗೆದ್ದಿದೆ. ತುಂಬಾ ನಿರೀಕ್ಷೆ ಹುಟ್ಟಿಸಿದ್ದ ಅಥ್ಲೀಟ್‌ಗಳು ಪದಕ ಗೆಲ್ಲದೆ ಬರಿಗೈಲಿ ತವರಿಗೆ ಮರಳಿದ್ದಾರೆ. ಹಲವು ಅಥ್ಲೀಟ್‌ಗಳು 4ನೇ ಸ್ಥಾನಿಯಾಗಿ ಪದಕ ತಪ್ಪಿಸಿಕೊಂಡಿದ್ದಾರೆ.
ಟಾಪ್-5ನಲ್ಲಿ ಫ್ರಾನ್ಸ್: 124 ವರ್ಷದಲ್ಲೇ ಶ್ರೇಷ್ಠ ಪ್ರದರ್ಶನ
ಈ ಒಲಿಂಪಿಕ್ಸ್‌ನ ಆತಿಥೇಯ ರಾಷ್ಟ್ರ ಫ್ರಾನ್ಸ್ 64 ಪದಕಗಳನ್ನು ತನ್ನದಾಗಿಸಿಕೊಂಡಿದ್ದು, ಪದಕ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಇದು ಪದಕ ಗಳಿಕೆಯಲ್ಲಿ 124 ವರ್ಷಗಳಲ್ಲೇ ಫ್ರಾನ್ಸ್‌ನ ಶ್ರೇಷ್ಠ ಪ್ರದರ್ಶನ. 1990ರಲ್ಲಿ ಪ್ಯಾರಿಸ್‌ನಲ್ಲೇ ನಡೆದಿದ್ದ ಕ್ರೀಡಾಕೂಟದಲ್ಲಿ ಫ್ರಾನ್ಸ್ 102 ಪದಕ ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. 1948ರಲ್ಲಿ ಪದಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದ ಫ್ರಾನ್ಸ್, ಆ ಬಳಿಕ ಇದೇ ಮೊದಲ ಬಾರಿ ಅಗ್ರ-5ರಲ್ಲಿ ಸ್ಥಾನ ಪಡೆದಿದೆ.
62 ರಾಷ್ಟ್ರ: ಈ ಬಾರಿ ಕನಿಷ್ಠ 1 ಚಿನ್ನದ ಪದಕ ಗೆದ್ದ ರಾಷ್ಟ್ರಗಳು 62
91 ರಾಷ್ಟ್ರ: ಪ್ಯಾರಿಸ್ ಗೇಮ್ಸ್‌ನಲ್ಲಿ 91 ದೇಶಗಳು ಕನಿಷ್ಠ 1 ಪದಕ ಗೆದ್ದಿವೆ.
115 ದೇಶ: ಈ ಸಲ ಒಲಿಂಪಿಕ್ಸ್‌ನಲ್ಲಿ ಒಂದೂ ಪದಕ ಗೆಲ್ಲದ ರಾಷ್ಟ್ರಗಳು 115