ಡಕಾರ್‌ ರ್‍ಯಾಲಿ 2 ಕ್ಲಾಸ್‌ ಗೆದ್ದ ಭಾರತದ ಹರಿತ್‌

| Published : Jan 20 2024, 02:01 AM IST

ಸಾರಾಂಶ

ವಿಶ್ವದ ಅತ್ಯಂತ ಅಪಾಯಕಾರಿ ಮೋಟಾರ್‌ ಸೈಕಲ್‌ ರೇಸ್‌ ಆಗಿರುವ ಡಾಕರ್‌ ರ್‍ಯಾಲಿಯ ಕ್ಲಾಸ್‌ 2ರಲ್ಲಿ ಭಾರತದ ಹರೀತ್‌ ನೋಹ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಯನ್ಬು (ಸೌದಿ ಅರೆಬಿಯಾ): ವಿಶ್ವದ ಅತ್ಯಂತ ಅಪಾಯಕಾರಿ ಮೋಟಾರ್‌ ಸೈಕಲ್‌ ರೇಸ್‌ ಆಗಿರುವ ಡಕಾರ್‌ ರ್‍ಯಾಲಿಯ ಕ್ಲಾಸ್‌ 2ರಲ್ಲಿ ಭಾರತದ ಹರಿತ್‌ ನೋಹ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಹರೀತ್‌ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದು, ಒಟ್ಟಾರೆ ಡಾಕರ್‌ ರ್‍ಯಾಲಿಯಲ್ಲಿ 11ನೇ ಸ್ಥಾನ ಪಡೆದಿದ್ದಾರೆ. ಸೌದಿ ಅರೇಬಿಯಾದ ಯನ್ಬು ಎಂಬಲ್ಲಿ ನಡೆದ ರೇಸ್‌ನಲ್ಲಿ ಟಿವಿಎಸ್‌ ರ್‍ಯಾಲಿ ಫ್ಯಾಕ್ಟರ್‌ ರೈಡರ್‌ ಹರಿತ್‌, 2 ಕ್ಲಾಸ್‌ನ ಕೊನೆ ಹಂತದಲ್ಲಿ 5ನೇ ಸ್ಥಾನಿಯಾದರು. ಒಟ್ಟಾರೆ ಕ್ಲಾಸ್‌ 2ರಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡರು. ಇದರೊಂದಿಗೆ ಡಕಾರ್‌ ರ್‍ಯಾಲಿ ಪೂರ್ಣಗೊಳಿಸಿದ ಮೊದಲ ಭಾರತೀಯ ತಯಾರಕ ಕಂಪನಿಯಾಗಿ ಹೀರೋ ಸ್ಫೋರ್ಟ್ಸ್‌ ಹೊರಹೊಮ್ಮಿದೆ. ಟೆಸ್ಟ್: ವಿಂಡೀಸ್‌ ವಿರುದ್ಧ ಆಸೀಸ್‌ಗೆ 10 ವಿಕೆಟ್‌ ಜಯಅಡಿಲೇಡ್‌: ವೆಸ್ಟ್ ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿ 10 ವಿಕೆಟ್‌ ಗೆಲುವು ಸಾಧಿಸಿದೆ. 26 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಆಸೀಸ್‌ 6.4 ಓವರ್‌ಗಳಲ್ಲಿ ಜಯಗಳಿಸಿ, 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಜೋಶ್‌ ಹೇಜಲ್‌ವುಡ್‌ ಟೆಸ್ಟ್‌ ಪಂದ್ಯವೊಂದರಲ್ಲಿ 11ನೇ ಬಾರಿ 5 ವಿಕೆಟ್‌ ಸಾಧನೆ ಮಾಡಿದರು.