ಬೆಂಗ್ಳೂರಲ್ಲಿ ಭಾರತ vs ಆಫ್ರಿಕಾ ವನಿತಾ ತಂಡಗಳ ನಡುವೆ ಟಿ20, ಏಕದಿನ

| Published : May 04 2024, 12:31 AM IST / Updated: May 04 2024, 04:13 AM IST

ಸಾರಾಂಶ

ಜೂನ್‌-ಜುಲೈ ತಿಂಗಳಲ್ಲಿ ತಲಾ 3 ಪಂದ್ಯ ನಿಗದಿ. ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳು ಜೂನ್‌-ಜುಲೈ ತಿಂಗಳಲ್ಲಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಲಾ ಟಿ20, ಏಕದಿನ ಪಂದ್ಯಗಳನ್ನಾಡಲಿವೆ. ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸರಣಿಯ ಮೊದಲ ಏಕದಿನ ಪಂದ್ಯ ಜೂ.16ಕ್ಕೆ ನಡೆಯಲಿದ್ದು, ಇನ್ನೆರಡು ಪಂದ್ಯಗಳು ಜೂ.19 ಮತ್ತು 23ಕ್ಕೆ ನಿಗದಿಯಾಗಿವೆ. ಬಳಿಕ ಚೆನ್ನೈನಲ್ಲಿ ಜೂ.28ರಿಂದ ಏಕೈಕ ಟೆಸ್ಟ್‌ ಪಂದ್ಯ ನಡೆಯಲಿದೆ. ನಂತರ ಉಭಯ ತಂಡಗಳು ಬೆಂಗಳೂರಿಗೆ ಮರಳಲಿದ್ದು, 3 ಟಿ20 ಪಂದ್ಯಗಳನ್ನಾಡಲಿವೆ. 

ಪಂದ್ಯಗಳು ಜು.5, 7 ಮತ್ತು9ಕ್ಕೆ ನಿಗದಿಯಾಗಿವೆ.ಉಭಯ ತಂಡಗಳ ನಡುವಿನ ಟಿ20 ಹಾಗೂ ಏಕದಿನ ಕ್ರಿಕೆಟ್‌ ಸರಣಿ ಕಳೆದ ವರ್ಷವೇ ನಡೆಯಬೇಕಿತ್ತು. ಆದರೆ ಪುರುಷರ ಏಕದಿನ ವಿಶ್ವಕಪ್‌ ಅಕ್ಟೋವರ್‌-ನವೆಂಬರ್‌ ತಿಂಗಳಲ್ಲಿ ನಡೆಯುತ್ತಿದ್ದ ಕಾರಣ ಮಹಿಳಾ ತಂಡಗಳ ನಡುವಿನ ಸರಣಿಯನ್ನು ಮುಂದೂಡಲಾಗಿತ್ತು.

ಐಸಿಸಿ ಟಿ20 ವಿಶ್ವಕಪ್‌: ಶ್ರೀನಾಥ್‌ ಮ್ಯಾಚ್‌ ರೆಫ್ರಿ

ದುಬೈ: ಜೂ.1ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯಗಳಿಗೆ ಐಸಿಸಿಯು ಶುಕ್ರವಾರ ಅಂಪೈರ್‌ಗಳು ಹಾಗೂ ಮ್ಯಾಚ್‌ ರೆಫ್ರಿಗಳ ಹೆಸರನ್ನು ಪ್ರಕಟಿಸಿತು. ಕರ್ನಾಟಕದ ಜಾವಗಲ್‌ ಶ್ರೀನಾಥ್‌ ಸೇರಿ 6 ಮಂದಿ ಮ್ಯಾಚ್‌ ರೆಫ್ರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತದ ನಿತಿನ್‌ ಮೆನನ್‌ ಹಾಗೂ ಜಯರಾಮನ್‌ ಮದನ್‌ಗೋಪಾಲ್‌ ಅಂಪೈರ್‌ಗಳ ಪಟ್ಟಿಯಲ್ಲಿದ್ದಾರೆ. ಟಿ20 ವಿಶ್ವಕಪ್‌ ಜೂ.29ರ ವರೆಗೆ ನಡೆಯಲಿದೆ. ವೆಸ್ಟ್‌ಇಂಡೀಸ್‌ ಹಾಗೂ ಅಮೆರಿಕದ ಆತಿಥ್ಯ ವಹಿಸಲಿವೆ.