ಸಾರಾಂಶ
ನವದೆಹಲಿ: ಕ್ರಿಕೆಟ್ ಜಗತ್ತಿನ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಸೆಣಸಾಟದ ಕುರಿತ ಸಾಕ್ಷ್ಯಚಿತ್ರ ನಿರ್ಮಿಸುವುದಾಗಿ ಖ್ಯಾತ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ ಘೋಷಣೆ ಮಾಡಿದೆ.
ಈಗಾಗಲೇ "ದಿ ಗ್ರೇಟೆಸ್ಟ್ ರೈವಲ್ರಿ " ಎಂಬ ಶೀರ್ಷಿಕೆಯಡಿ ಸಾಕ್ಷ್ಯಚಿತ್ರ ಸರಣಿಯ ಫಸ್ಟ್‌ಲುಕ್ ವಿಡಿಯೋ ಬಿಡುಗಡೆಯಾಗಿದೆ.
ಕಪಿಲ್ ದೇವ್ ಹಾಗೂ ಇಮ್ರಾನ್ ಖಾನ್ ವಿಶ್ವಕಪ್ ಟ್ರೋಫಿ ಹಿಡಿದಿರುವ ಹಾಗೂ ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕುರಿತ ದೃಶ್ಯಗಳು ಫಸ್ಟ್‌ಲುಕ್‌ನಲ್ಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.
ಸೀರಿಸ್ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ.ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳ ಐತಿಹಾಸಿಕ ಕ್ಷಣಗಳನ್ನು ಸಾಕ್ಷ್ಯಚಿತ್ರ ಒಳಗೊಳ್ಳಲಿದೆ.
ಕೇವಲ ಕ್ರಿಕೆಟ್‌ಗೆ ಸೀಮಿತವಾ ಗಿರದೆ ಭಾರತ-ಪಾಕ್ ನಡುವಿನ ಗಡಿ ಮತ್ತು ಇತರೆ ವಿಚಾರಗಳ ಮೇಲೂ ಬೆಳಕು ಚೆಲ್ಲಬಹುದು.
ದೊಡ್ಡ ಮಟ್ಟದ ಸೆಣಸಾಟಗಳಲ್ಲಿ ಏರ್ಪಡುವ ಮಾನಸಿಕ ಘರ್ಷಣೆಯ ಕುರಿತು ವಿವರವಾದ ವಿಶ್ಲೇಷಣೆಯ ಮೂಲಕ ಕ್ರಿಕೆಟ್ ಜಗತ್ತಿನ ಇನ್ನಷ್ಟು ಆಳಕ್ಕೆ ಹೋಗುವ ನಿರೀಕ್ಷೆಯಿದೆ.