ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್‌ ಪಂದ್ಯದ ಟಿಕೆಟ್‌ಗೆ ಲಕ್ಷ ಲಕ್ಷ!

| Published : Mar 03 2024, 01:31 AM IST / Updated: Mar 03 2024, 08:48 AM IST

ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್‌ ಪಂದ್ಯದ ಟಿಕೆಟ್‌ಗೆ ಲಕ್ಷ ಲಕ್ಷ!
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಜೂ.9ರಂದು ನಡೆಯಲಿರುವ ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್‌ ಪಂದ್ಯದ ಟಿಕೆಟ್‌ಗೆ ಬೆರಗಾಗುವ ಬೆಲೆ ಬಂದಿದೆ.

ನವದೆಹಲಿ: ಅಮೆರಿಕದ ನ್ಯೂಯಾರ್ಕ್‌ನಲ್ಲಿ ಜೂ.9ರಂದು ನಡೆಯಲಿರುವ ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್‌ ಪಂದ್ಯದ ಟಿಕೆಟ್‌ಗೆ ಭಾರಿ ಬೇಡಿಕೆ ಮುಂದುವರಿದಿದೆ. 

ಕಳೆದ ತಿಂಗಳೇ ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ ಮೂಲಕ ಲಾಟರಿಯಲ್ಲಿ ಆಯ್ಕೆಯಾದ ವ್ಯಕ್ತಿಗಳಿಗೆ ಟಿಕೆಟ್‌ ಮಾರಾಟ ಮಾಡಿತ್ತು. ಟಿಕೆಟ್‌ ಖರೀದಿಸಿದ ಕೆಲವರು, ಅವುಗಳನ್ನು ದುಬಾರಿ ಮೊತ್ತಕ್ಕೆ ಮರು ಮಾರಾಟ ಮಾಡುತ್ತಿದ್ದಾರೆ. 

ಟಿಕೆಟ್‌ ರೀಸೇಲ್‌ ಮಾಡಲೆಂದೇ ಕೆಲ ವೆಬ್‌ಸೈಟ್‌ಗಳಿದ್ದು, ಅದರಲ್ಲಿ ಲಕ್ಷಾಂತರ ರು.ಗೆ ಟಿಕೆಟ್‌ಗಳನ್ನು ಮಾರಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ನ್ಯೂಯಾರ್ಕ್‌ನ ಕೌಂಟಿ ಕ್ರೀಡಾಂಗಣವೊಂದನ್ನು ವಿಶ್ವಕಪ್‌ ಪಂದ್ಯಕ್ಕೆ ಸಿದ್ಧಗೊಳಿಸಲಾಗುತ್ತಿದ್ದು, 37000 ಆಸನ ಸಾಮರ್ಥ್ಯದ ತಾತ್ಕಾಲಿಕ ಪ್ರೇಕ್ಷಕರ ಗ್ಯಾಲರಿಯೊಂದನ್ನು ನಿರ್ಮಿಸಲಾಗುತ್ತಿದೆ.

ಭಾರತದ 9 ಬಾಕ್ಸರ್‌ಗಳಿಗೆ ಒಲಿಂಪಿಕ್ಸ್‌ ಅರ್ಹತೆ ನಿರೀಕ್ಷೆ
ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಭಾನುವಾರದಿಂದ ಇಟಲಿಯ ಬುಸ್ಟೊ ಅರ್ಸಿಜಿಯೊದಲ್ಲಿ ಅರ್ಹತಾ ಟೂರ್ನಿ ನಡೆಯಲಿದ್ದು, ಭಾರತದ 9 ಬಾಕ್ಸರ್‌ಗಳು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. 

7 ಪುರುಷ ಹಾಗೂ 2 ಮಹಿಳಾ ಬಾಕ್ಸರ್‌ಗಳು ಕಣಕ್ಕಿಳಿಯಲಿದ್ದು, ಸೆಮಿಫೈನಲ್‌ ಪ್ರವೇಶಿಸಿದರೆ ಒಲಿಂಪಿಕ್ಸ್‌ಗೆ ಪ್ರವೇಶ ದೊರೆಯಲಿದೆ. 

ಮಹಿಳಾ ವಿಭಾಗದಲ್ಲಿ ಜೈಸ್ಮಿನ್ ಲಂಬೋರಿಯಾ (60 ಕೆಜಿ), ಅಂಕುಶಿತಾ ಬೊರೊ (66 ಕೆಜಿ), ಪುರುಷರ ವಿಭಾಗದಲ್ಲಿ ದೀಪಕ್ ಭೋರಿಯಾ (51 ಕೆಜಿ), ಮೊಹಮ್ಮದ್ ಹುಸ್ಮುದ್ದಿನ್‌ (57 ಕೆಜಿ), ಶಿವ ಥಾಪ (63.5 ಕೆಜಿ), ನಿಶಾಂತ್ ದೇವ್ (71 ಕೆಜಿ), ಲಕ್ಷ್ಯ ಚಹರ್ (80 ಕೆಜಿ), ಸಂಜೀತ್ (92 ಕೆಜಿ), ನರೇಂದರ್ ಬರ್ವಾಲ್ (92 ಕೆಜಿ+) ಸ್ಪರ್ಧಿಸಲಿದ್ದಾರೆ.