ವಿಶ್ವಕಪ್‌ ಬಳಿಕ ನ್ಯೂಯಾರ್ಕ್‌ ಸ್ಟೇಡಿಯಂ ಸಂಪೂರ್ಣ ಧ್ವಂಸ?

| Published : Jun 13 2024, 12:50 AM IST / Updated: Jun 13 2024, 05:02 AM IST

ವಿಶ್ವಕಪ್‌ ಬಳಿಕ ನ್ಯೂಯಾರ್ಕ್‌ ಸ್ಟೇಡಿಯಂ ಸಂಪೂರ್ಣ ಧ್ವಂಸ?
Share this Article
  • FB
  • TW
  • Linkdin
  • Email

ಸಾರಾಂಶ

₹250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕ್ರೀಡಾಂಗಣ. ಕೇವಲ 4 ತಿಂಗಳಲ್ಲೇ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, 35 ಸಾವಿರ ಆಸನ ಸಾಮರ್ಥ್ಯ ಹೊಂದಿತ್ತು.

ನ್ಯೂಯಾರ್ಕ್‌: ಟಿ20 ವಿಶ್ವಕಪ್‌ಗಾಗಿಯೇ ನಿರ್ಮಿಸಲಾಗಿದ್ದ ನ್ಯೂಯಾರ್ಕ್‌ನ ನಾಸೌ ಕ್ರೀಡಾಂಗಣವನ್ನು ಟೂರ್ನಿಯ ಬಳಿಕ ಆಯೋಜಕರು ನೆಲಕ್ಕುರುಳಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಕ್ರೀಡಾಂಗಣವನ್ನು ವಿಶ್ವಕಪ್‌ ಪಂದ್ಯಗಳಿಗಾಗಿ 30 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 250 ಕೋಟಿ ರು.) ವೆಚ್ಚದಲ್ಲಿ, 40 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಕೇವಲ 4 ತಿಂಗಳಲ್ಲೇ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, 35 ಸಾವಿರ ಆಸನ ಸಾಮರ್ಥ್ಯ ಹೊಂದಿತ್ತು. 

ಭಾರತ-ಪಾಕಿಸ್ತಾನ ಸೇರಿದಂತೆ ಟೂರ್ನಿಯ ಒಟ್ಟು 8 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಬುಧವಾರ ಭಾರತ-ಅಮೆರಿಕ ಪಂದ್ಯ ಇಲ್ಲಿ ನಡೆದ ಕೊನೆ ಪಂದ್ಯ ಎಂದು ಹೇಳಲಾಗುತ್ತಿದೆ. ಈ ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್‌ ಇನ್‌ ಪಿಚ್‌ಗಳನ್ನು ಅಳವಡಿಸಲಾಗಿತ್ತು.

ಅರ್ಶ್‌ದೀಪ್‌ 9 ರನ್‌ ನೀಡಿ 4 ವಿಕೆಟ್: ಹೊಸ ದಾಖಲೆ

ಬುಧವಾರ ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಅರ್ಶ್‌ದೀಪ್‌ ಸಿಂಗ್‌ ಹೊಸ ದಾಖಲೆ ಬರೆದರು. ಮೊದಲ ಎಸೆತದಲ್ಲೇ ವಿಕೆಟ್‌ ಬೇಟೆ ಆರಂಭಿಸಿದ ಅರ್ಶ್‌ದೀಪ್‌ ಪಂದ್ಯದಲ್ಲಿ ಕೇವಲ 9 ರನ್‌ ನೀಡಿ 4 ವಿಕೆಟ್ ಕಬಳಿಸಿದರು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬೌಲರ್‌ನ ಶ್ರೇಷ್ಠ ಪ್ರದರ್ಶನ. ಈ ಮೊದಲು 2014ರಲ್ಲಿ ಆರ್‌.ಆಶ್ವಿನ್‌ ಆಸ್ಟ್ರೇಲಿಯಾ ವಿರುದ್ಧ 11 ರನ್‌ಗೆ 4 ವಿಕೆಟ್‌, 2012ರಲ್ಲಿ ಇಂಗ್ಲೆಂಡ್‌ ವಿರುದ್ಧ ಹರ್ಭಜನ್‌ ಸಿಂಗ್‌ 12 ರನ್‌ಗೆ 4 ವಿಕೆಟ್‌, 2007ರಲ್ಲಿ ದ.ಆಫ್ರಿಕಾ ವಿರುದ್ಧ ಆರ್‌.ಪಿ.ಸಿಂಗ್‌ 19 ರನ್‌ ನೀಡಿ 4 ವಿಕೆಟ್‌ ಕಬಳಿಸಿದ್ದರು.

18: ಪವರ್‌ಪ್ಲೇನಲ್ಲಿ ಭಾರತ ವಿರುದ್ಧ ಅತಿ ಕನಿಷ್ಠ ಮೊತ್ತ

ಪಂದ್ಯದಲ್ಲಿ ಭಾರತ ವಿರುದ್ಧ ಯುಎಸ್‌ಎ ಪವರ್‌-ಪ್ಲೇ ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಕೇವಲ 18 ರನ್‌ ಗಳಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ತಂಡವೊಂದು ಗಳಿಸಿದ ಅತಿ ಕನಿಷ್ಠ ಮೊತ್ತ. 2014ರಲ್ಲಿ ವೆಸ್ಟ್‌ಇಂಡೀಸ್‌ ತಂಡ ಪವರ್‌-ಪ್ಲೇನಲ್ಲಿ ಕೇವಲ 24 ರನ್‌ ಗಳಿಸಿತ್ತು.