ಸಾರಾಂಶ
ನವದೆಹಲಿ: ಭಾರತ ಪುರುಷರ ಫುಟ್ಬಾಲ್ ತಂಡ ಫಿಫಾ ರ್‍ಯಾಂಕಿಂಗ್‌ನಲ್ಲಿ 121ನೇ ಸ್ಥಾನಕ್ಕೆ ಕುಸಿದಿದೆ. 2026ರ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿರುವ ಭಾರತ, ಗುರುವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ 4 ಸ್ಥಾನ ಕೆಳಕ್ಕೆ ಜಾರಿದೆ. ಇದರೊಂದಿಗೆ ಭಾರತ ಕಳೆದ ಮೂರುವರೆ ತಿಂಗಳಲ್ಲೇ 19 ಸ್ಥಾನ ಕುಸಿತ ಕಂಡಂತಾಗಿದೆ.
ಡಿಸೆಂಬರ್‌ನಲ್ಲಿ 102ನೇ ಸ್ಥಾನದಲ್ಲಿದ್ದ ಭಾರತ ಇತ್ತೀಚೆಗಷ್ಟೇ 15 ಸ್ಥಾನಗಳ ಕುಸಿತ ಕಂಡು 117ನೇ ಸ್ಥಾನದಲ್ಲಿತ್ತು. ಆದರೆ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ತವರಲ್ಲೇ ಆಘಾತಕಾರಿ ಸೋಲುಂಡ ಹಿನ್ನೆಲೆಯಲ್ಲಿ ರ್‍ಯಾಂಕಿಂಗ್‌ನಲ್ಲಿ ಹಿಂಬಡ್ತಿ ಪಡೆದಿದೆ.ಕಳೆದ ವರ್ಷ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಇಂಟರ್‌ಕಾಂಟಿನೆಂಟಲ್ ಹಾಗೂ ಸ್ಯಾಫ್ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ, 3 ದೇಶಗಳ ನಡುವಿನ ಟೂರ್ನಿಯನ್ನೂ ಗೆದ್ದುಕೊಂಡಿತ್ತು. ಆದರೆ ಜನವರಿಯಲ್ಲಿ ನಡೆದ ಎಎಫ್‌ಸಿ ಏಷ್ಯನ್ ಕಪ್ ಟೂರ್ನಿಯಲ್ಲಿ ಭಾರತ ತಂಡ ಎಲ್ಲಾ 3 ಪಂದ್ಯಗಳಲ್ಲಿ ಸೋತು ‘ಬಿ’ ಗುಂಪಿನಲ್ಲಿ ಕೊನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಪಾಕ್‌ನಲ್ಲಿ ವಾಲಿಬಾಲ್ ಆಡುವಂತೆ ಭಾರತಕ್ಕೆ ಮನವಿ
ಕರಾಚಿ: ಮೇ 11ರಿಂದ 17ರ ವರೆಗೆ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಏಷ್ಯನ್ ಚಾಲೆಂಜ್ ವಾಲಿಬಾಲ್ ಲೀಗ್‌ನಲ್ಲಿ ಪಾಲ್ಗೊಳ್ಳುವಂತೆ ಭಾರತಕ್ಕೆ ಪಾಕಿಸ್ತಾನ ವಾಲಿಬಾಲ್ ಫೆಡರೇಷನ್(ಪಿವಿಎಫ್) ಮನವಿ ಮಾಡಿದೆ. ಈ ಬಗ್ಗೆ ಪಿವಿಎಫ್ ಮುಖ್ಸಸ್ಥ ಯಾಕೂಬ್ ಚೌಧರಿ ಮಾಹಿತಿ ನೀಡಿದ್ದು, ಭಾರತ ಸೇರಿ ಎಲ್ಲಾ ದೇಶಗಳಿಗೂ ಆಹ್ವಾನ ಪತ್ರ ನೀಡಿದ್ದಾಗಿ ತಿಳಿಸಿದ್ದಾರೆ. ಟೂರ್ನಿಯಲ್ಲಿ ಇರಾನ್, ಶ್ರೀಲಂಕಾ, ಭೂತಾನ್, ತುರ್ಕ್‌ಮೇನಿಸ್ತಾನ, ಅಫ್ಘಾನಿಸ್ತಾನ, ಕಜಕಸ್ತಾನ, ಕಿರ್ಗಿಸ್ಥಾನ ತಂಡಗಳು ಪಾಲ್ಗೊಳ್ಳಲಿದ್ದು, ಇನ್ನೂ 4-5 ತಂಡಗಳು ಭಾಗವಹಿಸುವ ವಿಶ್ವಾಸವನ್ನು ಪಿವಿಎಫ್ ವ್ಯಕ್ತಪಡಿಸಿದೆ.
;Resize=(128,128))
;Resize=(128,128))
;Resize=(128,128))
;Resize=(128,128))