ಸಾರಾಂಶ
ಬೆಂಗಳೂರು: ಬಹರೇನ್‌ನಲ್ಲಿ ಫೆ.23ರಿಂದ ಮಹಿಳೆಯರ ಇಂಡೋ-ಗಲ್ಫ್ ಅಂತಾರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಶಿಪ್ ಆರಂಭವಾಗಲಿದ್ದು, ಭಾರತ ತಂಡದ ನಾಯಕಿಯಾಗಿ ಕರ್ನಾಟಕದ ಸಂಪೂರ್ಣ ಹೆಗಡೆ ಆಯ್ಕೆಯಾಗಿದ್ದಾರೆ. ತಂಡದಲ್ಲಿ ತನಿಶಾ ಜೈನ್, ಆಯ್ಲಾ ರಚಿತಾ ವಿಜಯ್, ಕಲ್ಪನಾ ಚಲ್ಲಾ, ಪಾವನಿ ಚೋಡಿಸೆಟ್ಟಿ, ಅನಿತಾ ವೀಣಾ, ದೀಪಾ ಹೆಬ್ಬಾರ್, ಪೃಶಾ ಉತ್ಪಲಾಕ್ಷಿ ಶ್ರೀನಿವಾಸನ್, ರಾಜ್ಯದ ಕೀರ್ತನಾ ಪರಮೇಶ್ವರನ್ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಎನ್.ಎಸ್.ಸುಬ್ರಮಣ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.ಅಲ್ಲದೆ, ಮಾ.14, 15 ಮತ್ತು 16ರಂದು ಬಿಹಾರದ ಆರಾ ಜಿಲ್ಲೆಯಲ್ಲಿ 46ನೇ ಹಿರಿಯರ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಶಿಪ್ ನಡೆಯಲಿದ್ದು, ಕರ್ನಾಟಕ ಸೇರಿದಂತೆ 30 ತಂಡಗಳು ಪಾಲ್ಗೊಳ್ಳಲಿವೆ.
ಇದರಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರ್ತಿಯರನ್ನು ಮೇ ತಿಂಗಳ ಅಂತ್ಯಕ್ಕೆ ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಥ್ರೋಬಾಲ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಭಾರತದ ಥ್ರೋಬಾಲ್ ಸಂಸ್ಥೆ ಅಧ್ಯಕ್ಷ ಡಾ.ಎಸ್.ಮಣಿ ಮಾಹಿತಿ ನೀಡಿದ್ದಾರೆ.