ಸಾರಾಂಶ
ಮೊದಲನೇ ಪಂದ್ಯದಲ್ಲಿ ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ವಿರುದ್ಧ 3-1ಅಂತರದಿಂದ ಗೆದ್ದು ಬೀಗಿರುವ ಬೆಂಗಳೂರು, ಎರಡನೇ ಪಂದ್ಯದಲ್ಲೂ ಗೆಲ್ಲುವ ಉತ್ಸಾಹದಲ್ಲಿದೆ.
ಚೆನ್ನೈ: ಚೆನ್ನೈನ ಜವಾಹರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೇ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಭಾನುವಾರ ಬೆಂಗಳೂರು ಟ್ರಾಪಿಡೋಸ್ ತಂಡ ದೆಹಲಿ ತೂಫಾನ್ಸ್ ವಿರುದ್ಧ ಸೆಣಸಲಿದೆ. ಮೊದಲನೇ ಪಂದ್ಯದಲ್ಲಿ ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ವಿರುದ್ಧ 3-1ಅಂತರದಿಂದ ಗೆದ್ದು ಬೀಗಿರುವ ಬೆಂಗಳೂರು, ಎರಡನೇ ಪಂದ್ಯದಲ್ಲೂ ಗೆಲ್ಲುವ ಉತ್ಸಾಹದಲ್ಲಿದೆ.