ಸಾರಾಂಶ
ಇಸ್ಲಾಮಾಬಾದ್: ಟಿ20 ವಿಶ್ವಕಪ್‌ಗೂ ಮುನ್ನ ಫಿಟ್ನೆಸ್ ಹೆಚ್ಚಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಸೇನಾ ನೆಲೆಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಸೈನಿಕರ ಶೈಲಿಯಲ್ಲೇ ಆಟಗಾರರಿಗೂ ತರಬೇತಿ ನೀಡಲಾಗುತ್ತಿದ್ದು, ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.ಕ್ರಿಕೆಟಿಗರು ಕಲ್ಲು ಹೊತ್ತು ಗುಡ್ಡ ಹತ್ತುವ, ಟಯರ್ ಎಳೆದೊಯ್ಯುವ, ಎತ್ತರಕ್ಕೆ ಕಟ್ಟಿರುವ ಹಗ್ಗಗಳನ್ನು ಏರುವ, ದಪ್ಪದ ವ್ಯಕ್ತಿಗಳನ್ನು ಹೊರುವ ಫೋಟೋಗಳು ಹರಿದಾಡುತ್ತಿವೆ. ಕೆಲ ಆಟಗಾರರು ಸೈನಿಕರ ಜೊತೆ ಗನ್ ಕೂಡಾ ಹಿಡಿದಿದ್ದಾರೆ. ಇದು ಟ್ರೋಲ್‌ಗೆ ಗುರಿಯಾಗಿದ್ದು, ಆಟ ಬಿಟ್ಟು ಸೈನಿಕರಂತೆ ತರಬೇತಿ ಪಡೆದರೆ ಗಾಯಗೊಂಡು ಮನೆಯಲ್ಲಿರಬೇಕಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಹಸರಂಗ 17ನೇ ಆವೃತ್ತಿ ಐಪಿಎಲ್‌ನಿಂದ ಹೊರಕ್ಕೆ
ನವದೆಹಲಿ: ಶ್ರೀಲಂಕಾದ ತಾಲಾ ಆಲ್ರೌಂಡರ್ ವಾನಿಂಡು ಹಸರಂಗ 17ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಬಿಸಿಸಿಐಗೆ ಪತ್ರ ಬರೆದಿದೆ. ಹಸರಂಗ ಪಾದ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಈ ಬಾರಿ ಐಪಿಎಲ್‌ನಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್‌ನ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.