ಐಪಿಎಲ್ ಪ್ರೊಮೊ ಬಿಡುಗಡೆ: ವಿಶೇಷ ಲುಕ್‌ನಲ್ಲಿ ಮಿಂಚಿದ ರಾಹುಲ್‌, ಪಂತ್‌

| Published : Mar 08 2024, 01:47 AM IST

ಐಪಿಎಲ್ ಪ್ರೊಮೊ ಬಿಡುಗಡೆ: ವಿಶೇಷ ಲುಕ್‌ನಲ್ಲಿ ಮಿಂಚಿದ ರಾಹುಲ್‌, ಪಂತ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಹುಲ್​ ಗೆಳೆಯರೊಂದಿಗೆ ಪಂದ್ಯ ವೀಕ್ಷಿಸುತ್ತಿರುವಾಗ ಅಂಪೈರ್ ನಿರ್ಧಾರ ಪ್ರಶ್ನಿಸಿ ಕೋಪಗೊಳ್ಳುವುದು ಪ್ರೊಮೊ ವಿಡಿಯೋದಲ್ಲಿ ಕಾಣಿಸುತ್ತದೆ. ಇನ್ನು ರಿಷಭ್ ಪಂತ್‌, ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಕೂಡಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನವದೆಹಲಿ: 17ನೇ ಆವೃತ್ತಿ ಐಪಿಎಲ್‌ಗೆ ದಿನಗಣನೆ ಆರಂಭವಾಗಿರುವಾಗಲೇ ಕನ್ನಡಿಗ ಕೆ.ಎಲ್‌.ರಾಹುಲ್‌ ಸೇರಿದಂತೆ ಸ್ಟಾರ್‌ ಆಟಗಾರರನ್ನು ನಟಿಸಿರುವ ಹೊಸ ಪ್ರೊಮೊ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.ಇತ್ತೀಚೆಗಷ್ಟೇ ಐಪಿಎಲ್‌ 2024ರ ಅಧಿಕೃತ ಟಿವಿ ಪ್ರಸಾರಕ ಸ್ಟಾರ್‌ಸ್ಪೋರ್ಟ್ಸ್‌ ಈ ಪ್ರೊಮೋ ವಿಡಿಯೋ ಬಿಡುಗಡೆ ಮಾಡಿದೆ. ಜಾಹೀರಾತಿನಲ್ಲಿ ಸೂಪರ್‌ ಸ್ಟಾರ್‌ಗಳಾದ ರಾಹುಲ್ ಜೊತೆಗೆ ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಹಾಗೂ ಹಾರ್ದಿಕ್‌ ಪಾಂಡ್ಯ ನಟಿಸಿದ್ದಾರೆ.

ಐಪಿಎಲ್‌ ಪಂದ್ಯ ವೀಕ್ಷಿಸುತ್ತಿರುವ ಅಭಿಮಾನಿಗಳು, ಸಾಮಾಜಿಕ ಮಾಧ್ಯಮದಲ್ಲಿ ಕಂಡುಬರುವ ಕ್ಷಣಗಳು ಮತ್ತು ಅಭಿಮಾನಿಗಳ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಈ ಪ್ರೊಮೋ ವಿಡಿಯೋ ತಯಾರಿಸಲಾಗಿದೆ.ಲಕ್ನೋ ತಂಡದ ನಾಯಕ, ಕನ್ನಡಿಗ ಕೆ.ಎಲ್ ರಾಹುಲ್ ಈ ಪ್ರೋಮೊದಲ್ಲಿ ಅತ್ಯಂತ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರು ಕನ್ನಡದಲ್ಲಿಯೇ ಮಾತನಾಡುವ ದೃಶ್ಯವಿದೆ. ರಾಹುಲ್​ ಗೆಳೆಯರೊಂದಿಗೆ ಪಂದ್ಯ ವೀಕ್ಷಿಸುತ್ತಿರುವಾಗ ಅಂಪೈರ್ ನಿರ್ಧಾರ ಪ್ರಶ್ನಿಸಿ ಕೋಪಗೊಳ್ಳುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಇನ್ನು ರಿಷಭ್ ಪಂತ್‌, ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಕೂಡಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.