ಸಾರಾಂಶ
ಐಪಿಎಲ್ ಹರಾಜಿನ ಮೊದಲ ದಿನ ಸ್ಟಾರ್ ಆಟಗಾರರರನ್ನು ಕೊಂಡುಕೊಳ್ಳಲು ಫ್ರಾಂಚೈಸಿಗಳು ಭಾರಿ ಪೈಪೋಟಿಗಿಳಿದರೆ, 2ನೇ ದಿನ ವೇಗದ ಬೌಲರ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. ಎರಡೂ ದಿನ ಭಾರತೀಯ ಕ್ರಿಕೆಟಿಗರಿಗೆ ಫ್ರಾಂಚೈಸಿಗಳು ಹೆಚ್ಚಿನ ಮಣೆ ಹಾಕಿದ್ದು ಈ ಬಾರಿ ಹರಾಜಿನ ವಿಶೇಷ.
ಜೆದ್ದಾ(ಸೌದಿ ಅರೇಬಿಯಾ): ಐಪಿಎಲ್ ಹರಾಜಿನ ಮೊದಲ ದಿನ ಸ್ಟಾರ್ ಆಟಗಾರರರನ್ನು ಕೊಂಡುಕೊಳ್ಳಲು ಫ್ರಾಂಚೈಸಿಗಳು ಭಾರಿ ಪೈಪೋಟಿಗಿಳಿದರೆ, 2ನೇ ದಿನ ವೇಗದ ಬೌಲರ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. ಎರಡೂ ದಿನ ಭಾರತೀಯ ಕ್ರಿಕೆಟಿಗರಿಗೆ ಫ್ರಾಂಚೈಸಿಗಳು ಹೆಚ್ಚಿನ ಮಣೆ ಹಾಕಿದ್ದು ಈ ಬಾರಿ ಹರಾಜಿನ ವಿಶೇಷ.
ಭಾನುವಾರ ಸೌದಿ ಅರೇಬಿಯಾದ ಜೆದ್ದಾ ನಗರದಲ್ಲಿ ಆರಂಭಗೊಂಡಿದ್ದ ಹರಾಜು ಪ್ರಕ್ರಿಯೆ, ಸೋಮವಾರವೂ ಮುಂದುವರಿಯಿತು. 10 ಫ್ರಾಂಚೈಸಿಗಳು ಒಟ್ಟು 000 ಆಟಗಾರರನ್ನು ಖರೀದಿಸಿದವು. ಒಟ್ಟಾರೆ 000 ಕೋಟಿ ಮೊತ್ತ ಖರ್ಚಾದವು. ಒಟ್ಟು 00 ಭಾರತೀಯ, 00 ವಿದೇಶಿ ಆಟಗಾರರು ವಿವಿಧ ತಂಡಗಳಿಗೆ ಬಿಕರಿಯಾದರು.ಚೆನ್ನೈ, ಪಂಜಾಬ್ ಗರಿಷ್ಠ 25 ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡರೆ, ಹರಾಜಿಗೂ ಮುನ್ನ ಎಲ್ಲಾ 6 ರೀಟೈನ್ ಅವಕಾಶ ಬಳಸಿಕೊಂಡಿದ್ದ ಹಾಲಿ ಚಾಂಪಿಯನ್ ಕೋಲ್ಕತಾ ಹರಾಜಿನಲ್ಲಿ ಕೇವಲ 16 ಆಟಗಾರರನ್ನು ಖರೀದಿಸಿತು.
ವೇಗಿಗಳೇ ಬಾಸ್: ಟೀಂ ಇಂಡಿಯಾದಿಂದ ಹೊರಬಿದ್ದು 2 ವರ್ಷವಾಗಿರುವ ಭುವನೇಶ್ವರ್ ಕುಮಾರ್ ಆರ್‌ಸಿಬಿಗೆ ಬರೋಬ್ಬರಿ ₹10.75 ಕೋಟಿಗೆ ಹರಾಜಾಗಿ, 2ನೇ ದಿನದ ಅತಿ ದುಬಾರಿ ಆಟಗಾರ ಎನಿಸಿಕೊಂಡರು. ಪದೇ ಪದೇ ಗಾಯಗೊಂಡು ಹಲವು ಪಂದ್ಯಗಳನ್ನು ತಪ್ಪಿಸಿಕೊಂಡಿರುವ ದೀಪಕ್ ಚಹರ್‌ಗೆ ಮುಂಬೈ ಇಂಡಿಯನ್ಸ್ ₹9.25 ಕೋಟಿ ಕೊಟ್ಟರೆ, ಭಾರತ ಟೆಸ್ಟ್ ತಂಡದಲ್ಲಿ ಮೀಸಲು ಬೌಲರ್ ಆಗಿರುವ ಮುಕೇಶ್ ಕುಮಾರ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ₹8 ಕೋಟಿಗೆ ಬಿಕರಿಯಾದರು.
ಭಾರತ ಟೆಸ್ಟ್ ತಂಡದಲ್ಲಿರುವ ವೇಗಿ ಆಕಾಶ್‌ದೀಪ್ ಸಿಂಗ್‌ಗೆ ಲಖನೌ ಸೂಪರ್ ಜೈಂಟ್ಸ್ ತಂಡ ₹8 ಕೋಟಿ ಕೊಟ್ಟರೆ, ಐಪಿಎಲ್‌ನಲ್ಲಿ 9.65 ಎಕಾನಮಿ ರೇಟ್ ಹೊಂದಿರುವ ತುಷಾರ್ ದೇಶಪಾಂಡೆ ₹6.5 ಕೋಟಿಗೆ ರಾಜಸ್ಥಾನ ರಾಯಲ್ಸ್ ಪಾಲಾದರು. ದಕ್ಷಿಣ ಆಫ್ರಿಕಾದ ಮಾರ್ಕೊ ಯಾನ್ಸನ್ ಪಂಜಾಬ್ ಕಿಂಗ್ಸ್‌ಗೆ ₹7 ಕೋಟಿಗೆ ಬಿಕರಿಯಾಗಿ, 2ನೇ ದಿನ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡರು.