ಸಾರಾಂಶ
ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಐರ್ಲೆಂಡ್ 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಜಯ ದಾಖಲಿಸಿತು.
ಅಬು ಧಾಬಿ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಐರ್ಲೆಂಡ್ 6 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಚೊಚ್ಚಲ ಟೆಸ್ಟ್ ಗೆಲುವಿನ ಸಂಭ್ರಮ ಆಚರಿಸಿದೆ. ತಾನಾಡಿದ 8ನೇ ಪಂದ್ಯದಲ್ಲಿ ಐರ್ಲೆಂಡ್‌ಗೆ ಮೊದಲ ಜಯ ದಕ್ಕಿದೆ. ಗೆಲ್ಲಲು 111 ರನ್ ಗುರಿ ಬೆನ್ನತ್ತಿದ ಐರಿಷ್ ಪಡೆ 31.3 ಓವರಲ್ಲಿ 4 ವಿಕೆಟ್ ಕಳೆದುಕೊಂಡು ಜಯಿಸಿತು. ನಾಯಕ ಆ್ಯಂಡಿ ಬಾಲ್ಬರ್ನಿ ಔಟಾಗದೆ 58 ರನ್ ಗಳಿಸಿದರು. 2ನೇ ಇನ್ನಿಂಗ್ಸಲ್ಲಿ ಆಫ್ಘನ್ 218 ರನ್ ಗಳಿಸಿತ್ತು.ಸ್ಕೋರ್: ಅಫ್ಘಾನಿಸ್ತಾನ 155 ಹಾಗೂ 218, ಐರ್ಲೆಂಡ್ 263 ಹಾಗೂ 111/4
ಮೊದಲ ಟೆಸ್ಟ್ ಜಯಕ್ಕೆ
ತೆಗೆದುಕೊಂಡ ಪಂದ್ಯಗಳು
ತಂಡಟೆಸ್ಟ್‌ಆಸ್ಟ್ರೇಲಿಯಾ01ಇಂಗ್ಲೆಂಡ್02
ಪಾಕಿಸ್ತಾನ02ಅಫ್ಘಾನಿಸ್ತಾನ02
ವಿಂಡೀಸ್06ಐರ್ಲೆಂಡ್08
ಜಿಂಬಾಬ್ವೆ11ದಕ್ಷಿಣ ಆಫ್ರಿಕಾ12
ಶ್ರೀಲಂಕಾ14ಭಾರತ25
ಬಾಂಗ್ಲಾದೇಶ35ನ್ಯೂಜಿಲೆಂಡ್45