ರಣಜಿ ಆಡಿ ಎಂದರೂ ಬಿಸಿಸಿಐ ಸೂಚನೆಗೆ ಆಟಗಾರರು ಡೋಂಟ್‌ಕೇರ್‌!

| Published : Feb 17 2024, 01:16 AM IST

ರಣಜಿ ಆಡಿ ಎಂದರೂ ಬಿಸಿಸಿಐ ಸೂಚನೆಗೆ ಆಟಗಾರರು ಡೋಂಟ್‌ಕೇರ್‌!
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ಸಮಯದಿಂದ ರಾಷ್ಟ್ರೀಯ ತಂಡದಿಂದ ದೂರವಿರುವ ಇಶಾನ್‌ ಕಿಶನ್‌ ರಣಜಿಯಲ್ಲೂ ಆಡುತ್ತಿಲ್ಲ. ಬಿಸಿಸಿಐ ಸೂಚನೆ ಬಳಿಕ ಆದರೂ ಜಾರ್ಖಂಡ್‌ ಪರ ಆಡಲಿದ್ದಾರೆ ಎಂಬ ನಿರೀಕ್ಷೆ ಕೂಡಾ ಹುಸಿಯಾಗಿದ್ದು, ಐಪಿಎಲ್‌ಗೆ ತಯಾರಿ ನಡೆಸುತ್ತಿದ್ದಾರೆ.

ನವದೆಹಲಿ: ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಿದ್ದರೆ ದೇಸಿ ಕ್ರಿಕೆಟ್‌ ಆಡಬೇಕು ಎಂಬ ಬಿಸಿಸಿಐ ಸೂಚನೆಯನ್ನೂ ಭಾರತದ ಕೆಲ ಆಟಗಾರರು ಕಡೆಗಣಿಸಿದ್ದಾರೆ. ಇಶನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌, ದೀಪಕ್‌ ಚಹರ್‌ ಮಂಡಳಿಯ ಸೂಚನೆ ಉಲ್ಲಂಘಿಸಿ, ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಮಾನಸಿಕ ಆರೋಗ್ಯ ಸಮಸ್ಯೆದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದ ಬಳಿಕ ಭಾರತ ತಂಡದಿಂದ ಹೊರಗುಳಿದಿರುವ ಇಶಾನ್ ಕಿಶನ್ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಇತರರು ದೇಶೀಯ ಕ್ರಿಕೆಟ್ ಪುನರಾರಂಭಿಸಲು ಒತ್ತಾಯಿಸಿದರೂ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿದಿದ್ದಾರೆ.ರಣಜಿ ಪಂದ್ಯಗಳನ್ನು ಆಡಿದರೆ ಮಾತ್ರ ರಾಷ್ಟ್ರೀಯ ತಂಡಕ್ಕೆ ಆಯ್ಕೆಗೆ ಅರ್ಹತೆ ಎನ್ನುವ ಬಿಸಿಸಿಐ ನಿರ್ದೇಶನವನ್ನು ಕಡೆಗಣಿಸಿರುವ ಇಶಾನ್ ಕಿಶನ್, ಜಾರ್ಖಂಡ್ ತಂಡದ ರಣಜಿ ಟ್ರೋಫಿಯ ಕೊನೆಯ ಲೀಗ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ರಾಷ್ಟ್ರೀಯ ತಂಡದಿಂದ ದೂರವಿರುವ ಇಶಾನ್‌ ಕಿಶನ್‌ ರಣಜಿಯಲ್ಲೂ ಆಡುತ್ತಿಲ್ಲ. ಬಿಸಿಸಿಐ ಸೂಚನೆ ಬಳಿಕ ಆದರೂ ಜಾರ್ಖಂಡ್‌ ಪರ ಆಡಲಿದ್ದಾರೆ ಎಂಬ ನಿರೀಕ್ಷೆ ಕೂಡಾ ಹುಸಿಯಾಗಿದ್ದು, ಐಪಿಎಲ್‌ಗೆ ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ವೇಗದ ಬೌಲರ್‌ ದೀಪಕ್‌ ಚಹರ್‌, ತಾರಾ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಕೂಡಾ ರಣಜಿಯಲ್ಲಿ ಪಾಲ್ಗೊಂಡಿಲ್ಲ. ಇವರಿಬ್ಬರಿಗೂ ರಣಜಿ ಆಡುವಂತೆ ಸೂಚಿಸಲಾಗಿದ್ದರೂ ಅದಕ್ಕೆ ಮನ್ನಣೆ ನೀಡಿಲ್ಲ ಎಂದು ವರದಿಯಾಗಿದೆ.