ರೋಹಿತ್‌ ಶರ್ಮಾ ದಾಖಲೆಗಳ ಇನ್ನಿಂಗ್ಸ್‌

| Published : Feb 16 2024, 01:53 AM IST / Updated: Feb 16 2024, 08:07 AM IST

Rohith Sharma

ಸಾರಾಂಶ

ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನ ನಿರ್ಣಾಯಕ ಘಟ್ಟದಲ್ಲಿ ಆಕರ್ಷಕ ಶತಕ ಸಿಡಿಸಿದ ಭಾರತದ ನಾಯಕ ರೋಹಿತ್‌ ಶರ್ಮಾ, ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ರಾಜ್‌ಕೋಟ್‌: ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನ ನಿರ್ಣಾಯಕ ಘಟ್ಟದಲ್ಲಿ ಆಕರ್ಷಕ ಶತಕ ಸಿಡಿಸಿದ ಭಾರತದ ನಾಯಕ ರೋಹಿತ್‌ ಶರ್ಮಾ, ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

196 ಎಸೆತಗಳಲ್ಲಿ 131 ರನ್‌ ಸಿಡಿಸಿದ ರೋಹಿತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ 4ನೇ, ವಿಶ್ವದ 17ನೇ ಗರಿಷ್ಠ ರನ್‌ ಸರದಾರ ಎನಿಸಿಕೊಂಡರು. 

ಅವರು 470 ಪಂದ್ಯಗಳಲ್ಲಿ 18,641 ರನ್‌ ಕಲೆಹಾಕಿದ್ದು, ಮಾಜಿ ನಾಯಕ ಸೌರವ್‌ ಗಂಗೂಲಿ(18,575)ಯನ್ನು ಹಿಂದಿಕ್ಕಿದರು. ಸಚಿನ್ ತೆಂಡುಲ್ಕರ್‌(24,208), ವಿರಾಟ್‌ ಕೊಹ್ಲಿ(26,733), ರಾಹುಲ್‌ ದ್ರಾವಿಡ್‌ (24,208) ಮೊದಲ 3 ಸ್ಥಾನಗಳಲ್ಲಿದ್ದಾರೆ.

ರೋಹಿತ್‌ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ ಅತಿ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 

ಅವರು ಅಂ.ರಾ. ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 42 ಶತಕ ಸಿಡಿಸಿದ್ದು, ಕ್ರಿಸ್‌ ಗೇಲ್‌ ದಾಖಲೆ ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಡೇವಿಡ್‌ ವಾರ್ನರ್(49), ಸಚಿನ್ ತೆಂಡುಲ್ಕರ್‌(45) ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಸಿಕ್ಸರ್‌ ದಾಖಲೆ: ಪಂದ್ಯದಲ್ಲಿ 3 ಸಿಕ್ಸರ್‌ ಸಿಡಿಸಿದ ರೋಹಿತ್‌, ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸಿಕ್ಸರ್‌ ಗಳಿಕೆಯನ್ನು 212ಕ್ಕೆ ಹೆಚ್ಚಿಸಿದರು. 

ಇದು ಭಾರತದ ನಾಯಕರುಗಳ ಪೈಕಿ ಗರಿಷ್ಠ. ಈ ಮೂಲಕ ಎಂ.ಎಸ್‌.ಧೋನಿ(211 ಸಿಕ್ಸರ್‌) ಅವರನ್ನು ರೋಹಿತ್‌ ಹಿಂದಿಕ್ಕಿದರು. 

ಒಟ್ಟಾರೆ ವಿಶ್ವದ ನಾಯಕರುಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಇಯಾನ್‌ ಮೊರ್ಗನ್‌ 233 ಸಿಕ್ಸರ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಇನ್ನು ಟೆಸ್ಟ್‌ನಲ್ಲಿ ರೋಹಿತ್‌ ಒಟ್ಟು 79 ಸಿಕ್ಸರ್‌ ಬಾರಿಸಿದ್ದು, ಭಾರತದ ಪರ ಗರಿಷ್ಠ ಸಿಕ್ಸರ್‌ ಬಾರಿಸಿದವರ ಪಟ್ಟಿಯಲ್ಲಿ ಎಂ.ಎಸ್‌.ಧೋನಿ(78 ಸಿಕ್ಸರ್)ಅವರನ್ನು ಹಿಂದಿಕ್ಕಿ 2ನೇ ಸ್ಥಾನಿಯಾದರು. ವಿರೇಂದ್ರ ಸೆಹ್ವಾಗ್‌(91) ಅಗ್ರಸ್ಥಾನದಲ್ಲಿದ್ದಾರೆ.