ಟೆಸ್ಟ್‌ನಲ್ಲಿ 700 ವಿಕೆಟ್‌: ಎಲೈಟ್‌ ಕ್ಲಬ್‌ ಸೇರಿದ ದಿಗ್ಗಜ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌

| Published : Mar 10 2024, 01:30 AM IST / Updated: Mar 10 2024, 10:28 AM IST

ಟೆಸ್ಟ್‌ನಲ್ಲಿ 700 ವಿಕೆಟ್‌: ಎಲೈಟ್‌ ಕ್ಲಬ್‌ ಸೇರಿದ ದಿಗ್ಗಜ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌
Share this Article
  • FB
  • TW
  • Linkdin
  • Email

ಸಾರಾಂಶ

ಆ್ಯಂಡರ್‌ಸನ್‌ ಟೆಸ್ಟ್‌ ಕ್ರಿಕೆಟ್‌ನ ಗರಿಷ್ಠ ವಿಕೆಟ್‌ ಸರದಾರರ ಪಟ್ಟಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌, ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಮೊದಲ 2 ಸ್ಥಾನಗಳಲ್ಲಿದ್ದಾರೆ.

ಧರ್ಮಶಾಲಾ: ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ ಬೌಲರೊಬ್ಬರು 700 ವಿಕೆಟ್‌ ಪಡೆಯುವುದು ಯಾರಿಂದಲೂ ಊಹಿಸಲೂ ಕಷ್ಟ. 

ಆದರೆ ಇಂಗ್ಲೆಂಡ್‌ನ ದಿಗ್ಗಜ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಅದನ್ನು ಸಾಧಿಸಿ ತೋರಿಸಿದ್ದಾರೆ. ಈ ಮೂಲಕ ತಮ್ಮ ಹಿರಿಮೆಗೆ ಮತ್ತೊಂದು ಗರಿಯನ್ನು ಸೇರ್ಪಡೆಗೊಳಿಸಿದ್ದಾರೆ.

ಶುಕ್ರವಾರ ಕುಲ್ದೀಪ್‌ ಯಾದವ್‌ರನ್ನು ಔಟ್‌ ಮಾಡುವ ಮೂಲಕ 41ರ ವೇಗಿ ಆ್ಯಂಡರ್‌ಸನ್‌ ಟೆಸ್ಟ್‌ ವಿಕೆಟ್ ಗಳಿಕೆಯನ್ನು 700ಕ್ಕೆ ಹೆಚ್ಚಿಸಿದರು. ಟೆಸ್ಟ್‌ನಲ್ಲಿ 700ರ ಮೈಲಿಗಲ್ಲು ಸಾಧಿಸಿದ ಏಕೈಕ ವೇಗಿ ಎಂಬ ಹೆಗ್ಗಳಿಕೆಗೆ ಆ್ಯಂಡರ್‌ಸನ್‌ ಅವರದ್ದು. 

ಅವರು ಈ ವರೆಗೂ 187 ಟೆಸ್ಟ್‌ಗಳನ್ನು ಆಡಿದ್ದಾರೆ.2002ರಲ್ಲಿ ಪಾದಾರ್ಪಣೆ ಮಾಡಿದ್ದ ಆ್ಯಂಡರ್‌ಸನ್‌ ಟೆಸ್ಟ್‌ ಕ್ರಿಕೆಟ್‌ನ ಗರಿಷ್ಠ ವಿಕೆಟ್‌ ಸರದಾರರ ಪಟ್ಟಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿದ್ದಾರೆ. 

ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ 800, ಆಸ್ಟ್ರೇಲಿಯಾದ ಶೇನ್‌ ವಾರ್ನ್‌ 708 ವಿಕೆಟ್‌ ಕಬಳಿಸಿದ್ದಾರೆ. ಇವರಿಬ್ಬರೂ ಸ್ಪಿನ್ನರ್‌ಗಳು. 

ಭಾರತದ ಅನಿಲ್‌ ಕುಂಬ್ಳೆ(619), ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌(604) ಪಟ್ಟಿಯಲ್ಲಿ 4 ಮತ್ತು 5ನೇ ಸ್ಥಾನಗಳಲ್ಲಿದ್ದಾರೆ.