ಜುಲೈನಲ್ಲಿ ಟೆಸ್ಟ್‌ಗೆ ದಿಗ್ಗಜ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಗುಡ್‌ಬೈ

| Published : May 12 2024, 01:17 AM IST / Updated: May 12 2024, 04:27 AM IST

ಸಾರಾಂಶ

ವೆಸ್ಟ್‌ಇಂಡೀಸ್‌ ವಿರುದ್ಧ ಲಾರ್ಡ್ಸ್‌ನಲ್ಲಿ ಕೊನೆಯ ಟೆಸ್ಟ್‌. ಆ್ಯಂಡರ್‌ಸನ್‌ ಈ ವರೆಗೂ 187 ಟೆಸ್ಟ್‌ಗಳನ್ನು ಆಡಿದ್ದು ಬರೋಬ್ಬರಿ 700 ವಿಕೆಟ್‌ ಕಬಳಿಸಿದ್ದಾರೆ.

ಲಂಡನ್‌: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ವೇಗದ ಬೌಲರ್‌ ಎನ್ನುವ ದಾಖಲೆ ಹೊಂದಿರುವ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್‌ಸನ್‌, ಜುಲೈನಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ. ಜು.10ರಿಂದ ಲಂಡನ್‌ನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ ನಡೆಯಲಿದ್ದು, ಇದು 41 ವರ್ಷದ ಆ್ಯಂಡರ್‌ಸನ್‌ರ ಕೊನೆಯ ಟೆಸ್ಟ್‌ ಆಗಲಿದೆ.

 2003ರಲ್ಲಿ ಲಾರ್ಡ್ಸ್‌ ಮೈದಾನದಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಆ್ಯಂಡರ್‌ಸನ್‌, ಈ ವರೆಗೂ 187 ಟೆಸ್ಟ್‌ಗಳನ್ನು ಆಡಿದ್ದು ಬರೋಬ್ಬರಿ 700 ವಿಕೆಟ್‌ ಕಬಳಿಸಿದ್ದಾರೆ. ಹೊಸ ಪೀಳಿಗೆಯ ವೇಗಿಗಳಿಗೆ ಅವಕಾಶ ಮಾಡಿಕೊಡುವಂತೆ ತಂಡದ ಕೋಚ್‌ ಬ್ರೆಂಡನ್‌ ಮೆಕ್ಕಲಂ ಆ್ಯಂಡರ್‌ಸನ್‌ಗೆ ಸೂಚಿಸಿದ್ದಾರೆ ಎಂದು ಶುಕ್ರವಾರವಷ್ಟೇ ಸುದ್ದಿಯಾಗಿತ್ತು. ಶನಿವಾರ ಆ್ಯಂಡರ್‌ಸನ್‌ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

ಟಿ20: ಐರ್ಲೆಂಡ್‌ ವಿರುದ್ಧ ಪಾಕಿಸ್ತಾನಕ್ಕೆ ಸೋಲು

ಡಬ್ಲಿನ್‌: ಟಿ20 ವಿಶ್ವಕಪ್‌ ಸಿದ್ಧತೆಗಾಗಿ ಐರ್ಲೆಂಡ್‌ ಪ್ರವಾಸ ಕೈಗೊಂಡಿರುವ ಪಾಕಿಸ್ತಾನಕ್ಕೆ ಆಘಾತ ಎದುರಾಗಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ 5 ವಿಕೆಟ್‌ ಸೋಲು ಎದುರಾಯಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ, 6 ವಿಕೆಟ್‌ಗೆ 182 ರನ್‌ ಗಳಿಸಿತು. ಆ್ಯಂಡಿ ಬಾಲ್ಬರ್ನಿ (77) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಐರ್ಲೆಂಡ್‌ 19.5 ಓವರಲ್ಲಿ 5 ವಿಕೆಟ್‌ಗೆ 183 ರನ್‌ ಗಳಿಸಿ ಜಯಿಸಿತು.