ಸಾರಾಂಶ
ನವದೆಹಲಿ: ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಜಾವೆಲಿನ್ ಪಟು, ಕರ್ನಾಟಕದ ಡಿ.ಪಿ. ಮನು ಅವರು ದಕ್ಷಿಣ ಆಫ್ರಿಕಾದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಅಭ್ಯಾಸ ನಡೆಸಲು ಕೇಂದ್ರ ಕ್ರೀಡಾ ಸಚಿವಾಲಯ ಅನುಮೋದನೆ ನೀಡಿದೆ. ಪ್ರಸ್ತುತ ಪುಣೆಯಲ್ಲಿ ತರಬೇತಿ ಪಡೆಯುತ್ತಿರುವ ಅವರು, 32 ದಿನಗಳ ಕಾಲ ಪಾಶೆಫ್‌ಸ್ಟ್ರೂಮ್‌ನ ನಾರ್ತ್ ವೆಸ್ಟ್ ಯೂನಿವರ್ಸಿಟಿ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಅಭ್ಯಾಸ ನಡೆಸಲಿದ್ದು, ಸ್ಥಳೀಯ ಟೂರ್ನಿಗಳಲ್ಲೂ ಪಾಲ್ಗೊಳ್ಳಲಿದ್ದಾರೆ. ಮನು ಅವರ ಪ್ರಯಾಣ ಸೇರಿ ಎಲ್ಲಾ ವೆಚ್ಚಗಳನ್ನು ಸರ್ಕಾರವೇ ಭರಿಸಲಿದೆ.ಸಚಿವಾಲಯದ ಮಿಷನ್ ಒಲಿಂಪಿಕ್ ಸೆಲ್ ಏಷ್ಯನ್ ಗೇಮ್ಸ್ ಪದಕ ವಿಜೇತ ಶೂಟರ್ ಇಶಾ ಸಿಂಗ್ ಅವರು, ಇಟಲಿಯ ಪರ್ದಿನಿ ಕಾರ್ಖಾನೆಯಲ್ಲಿ ಯುದ್ಧಸಾಮಗ್ರಿ ಪರೀಕ್ಷೆ ಮತ್ತು ಹಿಡಿತ ತಯಾರಿಕೆಗೆ ಹಣಕಾಸಿನ ನೆರವು ನೀಡಲು ಒಪ್ಪಿಗೆ ಸೂಚಿಸಿದ್ದು, ಇಶಾ ತನ್ನ ಕೋಚ್ ಜೊತೆಗೆ ಇಟಲಿಯ ಟಸ್ಕನಿಗೆ ತೆರಳುತ್ತಿದ್ದಾರೆ. ಪ್ಯಾರಾ-ಅಥ್ಲೀಟ್‌ಗಳಾದ ನವದೀಪ್ ಸಿಂಗ್ ಮತ್ತು ಪುಷ್ಪೇಂದ್ರ ಸಿಂಗ್ ಅವರಿಗೆ ಹೊಸ ಜಾವೆಲಿನ್‌ಗಳ ಖರೀದಿಗೂ ಕೂಡಾ ಒಪ್ಪಿದೆ.