ಸಾರಾಂಶ
ನ್ಯೂಜಿಲೆಂಡ್ ಪರ ಈಗಾಗಲೇ ಸ್ಟೀಫನ್ ಫ್ಲೆಮಿಂಗ್. ಡ್ಯಾನಿಲ್ ವೆಟೋರಿ, ಬ್ರೆಂಡಾನ್ ಮೆಕಲಂ, ರಾಸ್ ಟೇಲರ್ ಕೂಡಾ 100ಕ್ಕೂ ಹೆಚ್ಚು ಟೆಸ್ಟ್ ಆಡಿದ್ದಾರೆ.
ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಹಾಲಿ ನಾಯಕ ಟಿಮ್ ಸೌಥಿ 100ನೇ ಟೆಸ್ಟ್ ಮೈಲಿಗಲ್ಲು ಸಾಧಿಸಿದ್ದಾರೆ.ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ಪಂದ್ಯದ ಮೂಲಕ ಈ ಸಾಧನೆ ಮಾಡಿದರು. 2008ರಲ್ಲಿ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಒಟ್ಟಿಗೇ ಆಡಿದ್ದ ವಿಲಿಯಮ್ಸನ್ ಹಾಗೂ ಸೌಥಿ, ಕಿವೀಸ್ ಪರ 100 ಟೆಸ್ಟ್ ಆಡಿದ 5 ಮತ್ತು 6ನೇ ಆಟಗಾರರು ಎನಿಸಿಕೊಂಡಿದ್ದಾರೆ. ಸ್ಟೀಫನ್ ಫ್ಲೆಮಿಂಗ್. ಡ್ಯಾನಿಲ್ ವೆಟೋರಿ, ಬ್ರೆಂಡಾನ್ ಮೆಕಲಂ, ರಾಸ್ ಟೇಲರ್ ಕೂಡಾ 100+ ಟೆಸ್ಟ್ ಆಡಿದ್ದಾರೆ.ಟೆಸ್ಟ್: ಕಿವೀಸ್ ವಿರುದ್ಧ ಆಸ್ಟ್ರೇಲಿಯಾ ಪ್ರಾಬಲ್ಯ
ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್ ವಿರುದ್ಧ ಶುಕ್ರವಾರ ಆರಂಭಗೊಂಡ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ದಿನವೇ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಕಿವೀಸ್, ಹೇಜಲ್‌ವುಡ್ ದಾಳಿಗೆ ತತ್ತರಿಸಿ ಕೇವಲ 162 ರನ್‌ಗೆ ಆಲೌಟಾಯಿತು. ಯಾವ ಬ್ಯಾಟರ್‌ಗೂ 40+ ರನ್ ಗಳಿಸಲಾಗಲಿಲ್ಲ. ಹೇಜಲ್‌ವುಡ್ 31ಕ್ಕೆ 5 ವಿಕೆಟ್ ಕಬಳಿಸಿದರು. ಬಳಿಕ ಇನ್ನಿಂಗ್ಸ್ ಆರಂಭಿಸಿರುವ ಆಸೀಸ್ ಮೊದಲ ದಿನದಂತ್ಯಕ್ಕೆ 4 ವಿಕೆಟ್‌ಗೆ 124 ರನ್ ಕಲೆಹಾಕಿದ್ದು, ಇನ್ನು ಕೇವಲ 38 ರನ್ ಹಿನ್ನಡೆಯಲ್ಲಿದೆ. ಲಬುಶೇನ್(45) ಕ್ರೀಸ್ ಕಾಯ್ದುಕೊಂಡಿದ್ದಾರೆ.