ಸಾರಾಂಶ
ದಕ್ಷಿಣ ವಲಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಚಾಂಪಿಯನ್. 80 ಚಿನ್ನ ಸೇರಿ ಒಟ್ಟು 172 ಪದಕಗಳನ್ನು ಬಾಚಿಕೊಂಡ ಕರ್ನಾಟಕದ ಈಜುಪಟುಗಳು.
ಕನ್ನಡಪ್ರಭ ವಾರ್ತೆ ಬೆಂಗಳೂರು
34ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಂಗಳೂರಲ್ಲಿ ನಡೆದ 3 ದಿನಗಳ ಕೂಟದ ಕೊನೆಯ ದಿನವಾದ ಶುಕ್ರವಾರ ರಾಜ್ಯದ ಈಜುಪಟುಗಳು 51 ಪದಕಗಳನ್ನು ಗೆದ್ದರು.ಕರ್ನಾಟಕ ಒಟ್ಟಾರೆ 80 ಚಿನ್ನ, 62 ಬೆಳ್ಳಿ, 30 ಕಂಚು ಸೇರಿ 172 ಪದಕಗಳನ್ನು ಜಯಿಸಿತು. 6 ರಾಜ್ಯಗಳ ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ದ ಕೂಟದಲ್ಲಿ ಕರ್ನಾಟಕದ ಹಲವು ಈಜುಪಟುಗಳು ಕೂಟ ದಾಖಲೆಗಳನ್ನು ಬರೆದರು.
11 ಚಿನ್ನ, 14 ಬೆಳ್ಳಿ, 12 ಕಂಚು ಸೇರಿ ಒಟ್ಟು 37 ಪದಕ ಗೆದ್ದ ತೆಲಂಗಾಣ 2ನೇ ಸ್ಥಾನ ಪಡೆದರೆ, 8 ಚಿನ್ನ, 17 ಬೆಳ್ಳಿ, 24 ಕಂಚಿನ ಪದಗಳೊಂದಿಗೆ ಒಟ್ಟು 49 ಪದಕಗಳನ್ನು ಜಯಿಸಿದ ಕೇರಳ ತಂಡ 3ನೇ ಸ್ಥಾನಿಯಾಯಿತು.4ನೇ ಸ್ಥಾನ ಪಡೆದ ತಮಿಳುನಾಡು 5 ಚಿನ್ನ 8 ಬೆಳ್ಳಿ, 31 ಕಂಚಿನೊಂದಿಗೆ ಒಟ್ಟು 44 ಪದಕ ಪಡೆದರೆ, 2 ಚಿನ್ನ, 6 ಬೆಳ್ಳಿ, 7 ಕಂಚಿನ ಪದಕಗಳೊಂದಿಗೆ ಒಟ್ಟು 15 ಪದಕಗಳನ್ನು ಜಯಿಸಿದ ಆಂಧ್ರ ಪ್ರದೇಶ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಕೇವಲ 1 ಕಂಚಿನ ಪದಕ ಪಡೆದ ಪುದುಚೇರಿ ಕೊನೆಯ ಸ್ಥಾನ ಗಳಿಸಿತು.
ವಾಟರ್ ಪೋಲೋ ಸ್ಪರ್ಧೆಯಲ್ಲಿ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳೆರಡೂ 2ನೇ ಸ್ಥಾನ ಪಡೆದವು.