ಸಾರಾಂಶ
ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವುದರ ಜೊತೆಗೆ ಮುಂಬರುವ ಏಷ್ಯನ್ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ಕರ್ನಾಟಕದ ಶ್ರೀಯಾ ರಾಜೇಶ್, ಪಾವನಾ ನಾಗರಾಜ್, ಉನ್ನತಿ ಬೋಳಂಡ.
ಲಖನೌ: ಈ ವರ್ಷ ಯುಎಇನಲ್ಲಿ ನಡೆಯಲಿರುವ ಏಷ್ಯನ್ ಕಿರಿಯರ ಅಥ್ಲೆಟಿಕ್ಸ್ ಕೂಟಕ್ಕೆ ಕರ್ನಾಟಕದ ಮೂವರು ಆಯ್ಕೆಯಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂಡರ್-20 ಚಾಂಪಿಯನ್‌ಶಿಪ್‌ನ ಮಹಿಳೆಯರ 400 ಮೀ. ಹರ್ಡಲ್ಸ್ ಓಟವನ್ನು ರಾಜ್ಯದ ಶ್ರೀಯಾ ರಾಜೇಶ್ 59.30 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.
ಉನ್ನತಿ ಬೋಲಂಡ 59.86 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆದರು. ಏಷ್ಯನ್ ಕೂಟಕ್ಕೆ ಅರ್ಹತೆ ಪಡೆಯಲು 1 ನಿಮಿಷ 1.13 ಸೆಕೆಂಡ್ ಸಮಯ ನಿಗದಿಪಡಿಸಲಾಗಿತ್ತು.ಇನ್ನು ಹೆಪ್ಟಥ್ಲಾನ್ (7 ಸ್ಪರ್ಧೆ)ನಲ್ಲಿ 5076 ಅಂಕ ಪಡೆದ ಪಾವನಾ ನಾಗರಾಜ್ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಲ್ಲದೇ ಏಷ್ಯನ್ ಕೂಟಕ್ಕೂ ಅರ್ಹತೆ ಗಿಟ್ಟಿಸಿದರು.
ಉನ್ನತಿ ಹಾಗೂ ಪಾವನಾಗೆ ಇದು ಕೂಟದಲ್ಲಿ 2ನೇ ಪದಕ.