ರಾಷ್ಟ್ರೀಯ ಥ್ರೋಬಾಲ್‌: ಬೆಳ್ಳಿ ಗೆದ್ದ ಕರ್ನಾಟಕ ವನಿತೆಯರು

| Published : Apr 06 2024, 12:48 AM IST / Updated: Apr 06 2024, 04:12 AM IST

ಸಾರಾಂಶ

ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿದ ಕರ್ನಾಟಕ ತಂಡ ಫೈನಲ್‌ನಲ್ಲೂ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಡೆಲ್ಲಿ ವಿರುದ್ಧ ಸೋತ ರಾಜ್ಯ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಶಿರಡಿ(ಮಹಾರಾಷ್ಟ್ರ): ಇಲ್ಲಿ ಮಾ.29ರಿಂದ ಮಾ.31ರ ವರೆಗೆ ನಡೆದ 33ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಥ್ರೋಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಫೈನಲ್‌ನಲ್ಲಿ ರಾಜ್ಯ ತಂಡ ಡೆಲ್ಲಿ ವಿರುದ್ಧ ಸೋಲನುಭವಿಸಿತು.

ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿದ ಕರ್ನಾಟಕ ತಂಡ ಫೈನಲ್‌ನಲ್ಲೂ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಡೆಲ್ಲಿ ವಿರುದ್ಧ ಸೋತ ರಾಜ್ಯ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಕರ್ನಾಟಕ ತಂಡದಲ್ಲಿ ಭೂಮಿಕಾ, ಪ್ರಜ್ವಲಾ, ಶೃತಿ ದುಬೆ, ಪ್ರಕೃತಿ ಎಂ., ಹೇಮಾ, ನಿಶ್ಚಿತಾ, ಕಾವ್ಯಾ ಎಂ.ಕೆ, ಭವ್ಯಶ್ರೀ, ಕೌಸಲ್ಯಾ, ಪೂರ್ವಿತಾ, ತೃಶಾ, ನವ್ಯಾ ಗೌಡ, ಅರುಂಧತಿ, ಸಿಂಧು ಹಾಗೂ ಭುವನೇಶ್ವರಿ ಇದ್ದರು. ತಂಡದ ಪದಕ ಗೆಲುವಿನ ಹಿಂದೆ ನರಸಿಂಹ ಮೂರ್ತಿ ಮುಖ್ಯ ಕೋಚ್‌ ಆಗಿ, ಮಂಜುನಾಥ ಎಚ್‌. ಹಾಗೂ ಕುಮಾರ್‌ ಸಹಾಯಕ ಕೋಚ್‌ಗಳಾಗಿ ಕಾರ್ಯನಿರ್ವಹಿಸಿದರು.

ಬೆಂಗಳೂರು 10ಕೆ ಓಟಕ್ಕೆ ವೆಲೇರಿ ರಾಯಭಾರಿ

ಬೆಂಗಳೂರು: ಏ.28ಕ್ಕೆ ನಿಗದಿಯಾಗಿರುವ ವಿಶ್ವ 10ಕೆ ಬೆಂಗಳೂರು ಓಟಕ್ಕೆ ಅಂತಾರಾಷ್ಟ್ರೀಯ ರಾಯಭಾರಿಯಾಗಿ ನ್ಯೂಜಿಲೆಂಡ್‌ನ ದಿಗ್ಗಜ ಶಾಟ್‌ ಪುಟ್‌ ಎಸೆತಗಾರ್ತಿ ವೆಲೇರಿ ಆ್ಯಡಮ್ಸ್‌ ಅವರನ್ನು ನೇಮಿಸಲಾಗಿದೆ. ಆ್ಯಡಮ್ಸ್‌ 2008 ಹಾಗೂ 2012ರ ಒಲಿಂಪಿಕ್ಸ್‌ನ ಶಾಟ್‌ಪುಟ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ 2016ರಲ್ಲಿ ಬೆಳ್ಳಿ, 2021ರಲ್ಲಿ ಕಂಚಿನ ಪದಕಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ 39ರ ಆ್ಯಡಮ್ಸ್‌ ಅವರು ವಿಶ್ವ ಅಥ್ಲೆಟಿಕ್ಸ್‌ ಆಯೋಗದ ಮುಖ್ಯಸ್ಥರಾಗಿದ್ದಾರೆ.