ಸಾರಾಂಶ
ಡೆಹ್ರಾಡೂನ್: 38ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳು ಅಥ್ಲೆಟಿಕ್ಸ್‌ನಲ್ಲಿ ಪದಕ ಬೇಟೆ ಆರಂಭಿಸಿದ್ದಾರೆ. ಭಾನುವಾರ ರಾಜ್ಯಕ್ಕೆ ಚಿನ್ನ ಸೇರಿದಂತೆ 4 ಪದಕಗಳು ಲಭಿಸಿವೆ. ಇದರೊಂದಿಗೆ ಒಟ್ಟಾರೆ ಪದಕ ಗಳಿಕೆ 62ಕ್ಕೆ ಏರಿಕೆಯಾಗಿದೆ. 31 ಚಿನ್ನ, 13 ಬೆಳ್ಳಿ, 18 ಕಂಚು ಗೆದ್ದಿರುವ ಕರ್ನಾಟಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಇದೆ.
ಮಹಿಳೆಯರ 4*100 ಮೀ. ರಿಲೇ ಸ್ಪರ್ಧೆಯಲ್ಲಿ ಕೀರ್ತನಾ, ಜ್ಯೋತಿಕಾ, ಉನ್ನತಿ ಅಯ್ಯಪ್ಪ ಹಾಗೂ ನಿಯೋಲ್ ಅನ್ನಾ ಕಾರ್ನೆಲಿಯೊ ಇದ್ದ ಕರ್ನಾಟಕ ತಂಡ 45.99 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿತು. ಕೇರಳ ಬೆಳ್ಳಿ, ತೆಲಂಗಾಣ ಕಂಚು ಜಯಿಸಿತು.ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಕರಿಶ್ಮಾ ಸನಿಲ್ 55.55 ಮೀ. ದೂರ ದಾಖಲಿಸಿ ಬೆಳ್ಳಿ ಗೆದ್ದರೆ, ರಮ್ಯಶ್ರೀ ಜೈನ್ 54.85 ಮೀ. ದೂರದೊಂದಿಗೆ ಕಂಚು ತಮ್ಮದಾಗಿಸಿಕೊಂಡರು. ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ಸುದೀಪ್ 2.08 ಮೀ. ಎತ್ತರಕ್ಕೆ ನೆಗೆದು ಕಂಚು ಪಡೆದರು. ಜೆಸ್ಸಿ ಸಂದೇಶ್ ಅಲ್ಪದರಲ್ಲೇ ಪದಕ ತಪ್ಪಿಸಿಕೊಂಡರು.
ಟೆನಿಸ್‌ನಲ್ಲಿ ಮತ್ತೆ 4 ಪದಕ ಖಚಿತ
ಟೆನಿಸ್‌ನಲ್ಲಿ ಕರ್ನಾಟಕಕ್ಕೆ ಮತ್ತೆ ಕನಿಷ್ಠ 4 ಪದಕ ಖಚಿತಗೊಂಡಿವೆ. ಪುರುಷರ ಡಬಲ್ಸ್‌ನಲ್ಲಿ ಪ್ರಜ್ವಲ್-ನಿಕಿ ಪೂನಚ್ಚ, ಮಿಶ್ರ ಡಬಲ್ಸ್‌ನಲ್ಲಿ ನಿಕಿ-ಸೋಹಾ ಸಾದಿಕ್ ಫೈನಲ್‌ಗೇರಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪ್ರಜ್ವಲ್ ದೇವ್, ಮಹಿಳಾ ಸಿಂಗಲ್ಸ್‌ನಲ್ಲಿ ಅಮೋದಿನಿ ನಾಯ್ಕ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.